ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ನಾಗನಕಟ್ಟೆಯನ್ನು ಅವೈಜ್ಞಾನಿಕವಾಗಿ ಕಟ್ಟಲಾಗಿದೆ ಎಂದು ಸಾರ್ವಜನಿಕರು, ಭಕ್ತಾಧಿಗಳು ಆರೋಪಿಸಿದ್ದು, ಸಾರ್ವಜನಿಕರ ಅಸಮಾಧಾನದ ನಡುವೆಯೂ ಕೆಲಸ ಮುಂದುವರೆಸುತ್ತಿರುವ ಹಿನ್ನೆಲೆ ಅದರ ವಿರುದ್ಧವಾಗಿ ಫೆ.20 ರಂದು ಸಂಜೆ ಮೃತ್ಯುಂಜಯೇಶ್ವರ ದೇವಸ್ಥಾನದ ನಾಗನಕಟ್ಟೆಯ ಸ್ಥಳದಲ್ಲಿ ಸಾರ್ವಜನಿಕ ಪ್ರತಿಭಟನೆ ನಡೆಯಲಿದೆ.
ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ನಾಗನ ಕಟ್ಟೆಯನ್ನು ಪ್ರಶ್ನೆಚಿಂತನೆಯಲ್ಲಿ ಕಂಡು ಬಂದ ಆಗೇ ಕಟ್ಟದೆ ಅವೈಜ್ಞಾನಿಕವಾಗಿ ಕಟ್ಟಲಾಗಿದೆ. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಕರಮನೆ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದಾರೆ.
ಪ್ರಶ್ನೆ ಚಿಂತನೆಯಲ್ಲಿ ಹೇಳಿದ ಪ್ರಕಾರ ನಾಗನ ಕಟ್ಟೆ ಮತ್ತು ಮರದ ಸಂಪೂರ್ಣ ಕುತ್ತಿಯನ್ನು ತೆಗೆದು ವಾಸ್ತು ಪ್ರಕಾರ ಊರಿನವರನ್ನು ಗಮನಕ್ಕೆ ತೆಗೆದುಕೊಂಡು, ಊರಿನವರನ್ನು ಸೇರಿಸಿ ನಾಗನ ಕಟ್ಟೆಯನ್ನು ನಿರ್ಮಾಣ ಮಾಡಬೇಕೆಂದು ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಿದ್ದು, ಆದರೆ ಲೋಕಪ್ಪ ಗೌಡ ಊರಿನವರಿಗೆ ಗಮನಕ್ಕೆ ತರದೇ ವಾಸ್ತು ತಜ್ಞರು ಮತ್ತು ತಂತ್ರಿಗಳು ಹೇಳಿದ ಪ್ರಕಾರ ನಾಗನ ಕಟ್ಟೆಯ ನಿರ್ಮಾಣ ಮಾಡುತ್ತಿರುವುದೆಂದು ಸುಳ್ಳು ಹೇಳಿ ಮರದ ಕುತ್ತಿಯನ್ನು ತೆಗೆಯದೆ ಕಾಮಗಾರಿಯನ್ನು ಮುಂದುವರಿಸಿದ್ದಾರೆ. ಆದ್ದರಿಂದ ಅವೈಜ್ಞಾನಿಕವಾಗಿ ಕಟ್ಟಿದ ನಾಗನ ಕಟ್ಟೆಯ ಕುರಿತು ಫೆ.20 ರಂದು ಸಂಜೆ ಮೃತ್ಯುಂಜಯೇಶ್ವರ ದೇವಸ್ಥಾನದ ನಾಗನ ಕಟ್ಟೆಯ ಸ್ಥಳದಲ್ಲಿ ಸಾರ್ವಜನಿಕ ಪ್ರತಿಭಟನೆ ನಡೆಯಲಿದೆ ಎಂದು ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ಭಕ್ತ ವೃಂದದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..