ಪುತ್ತೂರು: ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲೂಕು ಮೂಡ್ನೂರ್ ಕೊಂಬಲಿ ನಿವಾಸಿ ಸುಲೈಮಾನ್ ಬಂಧಿತ ಆರೋಪಿ.

ಈತನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣಾ ಅಕ್ರ ನಂಬರ್ 54/2020 u/s 448, 323, 504, 506 r/w 34 ಐಪಿಸಿರಂತೆ ಪ್ರಕರಣ ದಾಖಲಾಗಿತ್ತು.
ಸುಮಾರು 8 ತಿಂಗಳಿಂದ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿ ತಲೆ ಮರೆಸಿಕೊಂಡಿದ್ದು, ಫೆ.19 ರಂದು ಎಎಸ್ಐ ಚಂದ್ರ, ಹೆಚ್.ಸಿ ಪರಮೇಶ್, ಹೆಚ್.ಸಿ ಸುರೇಶ ಮತ್ತು ಪಿ ಸಿ ಗಿರಿ ಪ್ರಶಾಂತ್, ಕುಮಾರ್, ಪದ್ಮಾವತಿ ರವರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.