ಭಾರತದಲ್ಲಿ ಹೆಚ್ಚಾಗಿ ವಿವಾಹಗಳು ಮಂಟಪದಲ್ಲಿ ಅಥವಾ ದೇವಸ್ಥಾನದಲ್ಲಿ ನಡೆಯುತ್ತವೆ. ಆದರೆ ಇಲ್ಲೊಂದು ವಿವಾಹ ಸ್ವಲ್ಪ ಡಿಫರೆಂಟ್ ಯಾಕಂದ್ರೆ ಆಸ್ಪತ್ರೆಯಲ್ಲೇ ಮದುವೆ ನಡೆದಿದೆ.
ವರ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ವಧುವನ್ನ ಮದುವೆಯಾಗಿದ್ದಾನೆ. ಆಕೆಯ ಕೊರಲಿಗೆ ತಾಳಿ ಕಟ್ಟುವ ಮೂಲಕ ವಿವಾಹವಾಗಿದ್ದಾನೆ.
ಈ ಘಟನೆ ತೆಲಂಗಾಣ ಮಚೇರಿಯಾಲ ಜಿಲ್ಲಾ ಕೇಂದ್ರ ಆಸ್ಪತ್ರೆಯಲ್ಲಿ ನಡೆದಿದೆ. ಯುವಕ ಭೂಪಾಲಪಲ್ಲಿ ಜಿಲ್ಲೆ ತಿರುಪತಿ ಬಳಿಯ ಜಯಶಂಕರ್, ಯುವತಿ ಚೆನ್ನೂರು ಮಂಡಲದ ಲಂಬಾಡಿಪಲ್ಲಿಯ ಶೈಲಜಾ ಆಸ್ಪತ್ರೆಯಲ್ಲಿ ವಿವಾಹವಾದ ಜೋಡಿ.
ಮೊದಲೇ ಜಯಶಂಕರ್ ಮತ್ತು ಶೈಲಜಾಗೆ ವಿವಾಹ ನಿಶ್ಚಯವಾಗಿತ್ತು. ಮದುವೆ ದಿನಾಂಕವು ನಿಗದಿಯಾಗಿತ್ತು. ಆದರೆ ಮದುವೆಗೂ ಒಂದು ದಿನ ಮುಂಚೆ ವಧು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದಳು.
ಮದುವೆ ದಿನ ಆಸ್ಪತ್ರೆಯಲ್ಲಿದ್ದ ವಧುವನ್ನು ಕಂಡು ವರ ಅಲ್ಲಿಗೆ ಧಾವಿಸಿ ಆಕೆಯ ಕುತ್ತಿಗೆಗೆ ತಾಳಿ ಕಟ್ಟಿದ್ದಾನೆ. ಮದುವೆಯಾಗಲು ಮಂಟಪವಾದರೇನು..!!?? ಆಸ್ಪತ್ರೆಯಾದರೇನು..!?? ವಿವಾಹವಾದರೆ ಸಾಕು ಎಂದು ಅಲ್ಲಿಯೇ ತಾಳಿ ಕಟ್ಟಿದ್ದಾನೆ. ಇಬ್ಬರ ವಿವಾಹವನ್ನು ಕಣ್ಣಾರೆ ಕಂಡ ಆಸ್ಪತ್ರೆಯ ಸಿಬ್ಬಂದಿಗಳು, ಮನೆಯವರು ಎಲ್ಲರೂ ಚಪ್ಪಾಳೆ ತಟ್ಟಿದ್ದಾರೆ.
ಸದ್ಯ ಈ ಘಟನೆ ವೈರಲ್ ಆಗಿದ್ದು, ಆಸ್ಪತ್ರೆಯಲ್ಲಿಯೇ ವರನು ವಧುವನ್ನು ವಿವಾಹವಾಗಿರುವುದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿಸುತ್ತಿದ್ದಾರೆ. ಇನ್ನು ಕೆಲವರು ಹುಷಾರದ ಬಳಿಕ ಮದುವೆ ಆಗಬಹುದಿತ್ತು ಎಂದು ಕಮೆಂಟ್ ಬರೆದಿದ್ದಾರೆ..