ಪುತ್ತೂರು: ಕೆದಿಲ ಹಾಗೂ ಪೆರಾಜೆ ಗ್ರಾಮದ ಗಡಿಪ್ರದೇಶವಾದ ಗಡಿಯಾರದ ಸ್ವಾಗತ ನಗರ ಎಂಬಲ್ಲಿರುವ ವಿಶಾಲ ಗೋಮಾಳವನ್ನು ಅತಿಕ್ರಮಿಸಲಾಗಿದೆ ಎಂದು ಸ್ಥಳೀಯರು ಹಾಗೂ ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ.
ಸ್ಥಳೀಯ ಗ್ರಾಮ ಪಂಚಾಯತ್ ಹಾಲಿ ಮತ್ತು ಮಾಜಿ ಪ್ರತಿನಿಧಿಗಳಿಬ್ಬರ ಹುನ್ನಾರದಿಂದ ಈ ಅತಿಕ್ರಮಣ ನಡೆದಿದೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ.
ಕೆದಿಲ ಗ್ರಾಮದ 115-1ಪಿ1 ಸರ್ವೇ ನಂಬರ್ ನಲ್ಲಿ ಸರಕಾರ 14.56 ಎಕರೆ ಜಮೀನನ್ನು ಗೋಮಾಳಕ್ಕೆ ಮೀಸಲಾಗಿಟ್ಟಿದೆ. ಈ ಗೋಮಾಳ ಗ್ರಾಮದ ಗಡಿ ಭಾಗದಲ್ಲಿದ್ದು, ಇಲ್ಲಿ ಅನಾಯಾಸ ಅತಿಕ್ರಮಣ ನಡೆದಿದೆ ಎಂದು ತಿಳಿಸಿದ್ದಾರೆ.

ಗೋಮಾಳದಲ್ಲಿ ಐದಾರು ಮನೆ ನಿರ್ಮಾಣವಾಗಿದೆ. ಅಕ್ರಮ ಕಟ್ಟಡ ನಿರ್ಮಾಣವಾಗಿದೆ. ಇದರ ಬಗ್ಗೆ 2013 ರಿಂದ ಹಿಂದೂ ಜಾಗರಣ ವೇದಿಕೆ ಹಾಗೂ ಗೋ ಭಕ್ತರ ತಂಡ ಹೋರಾಟ ಮಾಡುತ್ತಿದೆ.
ಹಿಂದೂ ಜಾಗರಣ ವೇದಿಕೆ ಹಾಗೂ ಕೆದಿಲಾ ಗ್ರಾಮದ ಭಾ.ಜ.ಪ ದ ಜವಾಬ್ದಾರಿಯುತರ ಅವಿರತ ಪರಿಶ್ರಮದಿಂದ ಗೋಮಾಳ ಪ್ರದೇಶವನ್ನು ಅಳೆದು ಅಕ್ರಮ ಕಟ್ಟಡ ತೆರವುಗೊಳಿಸಿ ಗೋಮಾಳವನ್ನು ರಕ್ಷಿಸುವಂತೆ ತಹಶೀಲ್ದಾರ್ ರವರಿಗೆ ಜಿಲ್ಲಾಧಿಕಾರಿಯವರು ಸೂಚಿಸಿದ್ದರು. ಆದರೇ ಮತ್ತೆ ಗೋಮಾಳದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ತಲೆಯೆತ್ತಿದೆ. ಗೋಮಾಳವನ್ನು ಜೆಸಿಬಿಯಿಂದ ಅಗೆದು ತಟ್ಟು ಮಾಡಿ ಶೆಡ್ ಒಂದರ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಒಂದು ವಾರದಲ್ಲಿ ಗೋಮಾಳದಲ್ಲಿ ನಿರ್ಮಿಸಲಾದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸದಿದ್ದರೆ ಅಕ್ರಮ ಕಟ್ಟಡಗಳನ್ನು ನಾವೇ ತೆರವು ಗೊಳಿಸುವುದಾಗಿ ಗೋ ಭಕ್ತರು ಮತ್ತು ಹಿಂದೂ ಜಾಗರಣ ವೇದಿಕೆ ಪ್ರಮುಖರು ತಿಳಿಸಿದ್ದಾರೆ..