ಕರಾವಳಿ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ನೀಡಿದ ಹೇಳಿಕೆಯೊಂದು ಕಳೆದೆರಡು ದಿನಗಳಿಂದ ಭಾರೀ ಚರ್ಚೆ ಹುಟ್ಟು ಹಾಕಿದೆ. ಕೃಷ್ಣ ಮಠಕ್ಕೆ ಭೂಮಿ ಕೊಟ್ಟವರು ಮುಸ್ಲಿಂ ರಾಜರು ಎನ್ನುವ ಮಿಥುನ್ ರೈ ಹೇಳಿಕೆ ಭಾರೀ ಚರ್ಚೆ ಹುಟ್ಟು ಹಾಕಿದೆ. ವಿರೋಧ ಪಕ್ಷದ ನಾಯಕರು ಸೇರಿದಂತೆ ರಾಜ್ಯಾದ್ಯಂತ ಮಿಥುನ್ ರೈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ನಟ ರಕ್ಷಿತ್ ಶೆಟ್ಟಿ ಕೂಡ ಟ್ವೀಟ್ ಮಾಡಿ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದ ತಮ್ಮ ಖಾತೆಯಲ್ಲಿ ರಕ್ಷಿತ್ ಶೆಟ್ಟಿ ಈ ವಿವಾದದ ಕುರಿತಂತೆ ಬರೆದುಕೊಂಡಿದ್ದು, ಮಿಥುನ್ ರೈ ಹೆಸರನ್ನು ಬಳಸದೇ ತರಾಟೆಗೆ ತಗೆದುಕೊಂಡಿದ್ದಾರೆ. ‘ಉಡುಪಿ ದೇವಸ್ಥಾನಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ. ಇತಿಹಾಸ ಗೊತ್ತಿಲ್ಲ ಅಂದ್ರೆ ಸುಮ್ಮನಿರಿ, ಮಾಹಿತಿ ಗೊತ್ತಿಲ್ಲದೇ ಸಾರ್ವಜನಿಕವಾಗಿ ನಾನ್ ಸೆನ್ಸ್ ರೀತಿಯಲ್ಲಿ ಮಾತಾನಾಡೋದು ಯಾಕೆ?’ ಎಂದು ಪ್ರಶ್ನೆ ಮಾಡಿದ್ದಾರೆ. ಅವರು ಮಿಥುನ್ ರೈ ಹೆಸರು ಬಳಸದೇ ಇದ್ದರೂ, ಇವರಿಗೆ ಕೊಟ್ಟ ಪ್ರತಿಕ್ರಿಯೆ ಎನ್ನುವುದು ಸ್ಪಷ್ಟವಾಗುತ್ತದೆ.
ಸಾಮಾನ್ಯವಾಗಿ ರಾಜಕೀಯ ವ್ಯಕ್ತಿಗಳ ಹೇಳಿಕೆಗಳಿಗೆ ರಕ್ಷಿತ್ ಶೆಟ್ಟಿ ಈವರೆಗೂ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಸ್ವತಃ ತಮ್ಮ ಮೇಲೆಯೇ ಹಲವರು ನೆಗೆಟಿವ್ ಕಾಮೆಂಟ್ ಮಾಡಿದಾಗಲೂ ರಕ್ಷಿತ್ ಮೌನವಹಿಸಿದ್ದರು. ಆದರೆ, ಉಡುಪಿ ಮಠಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದ್ದಾರೆ. ರಕ್ಷಿತ್ ಪೋಸ್ಟ್ ಗೆ ಹಲವರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
The temple town of Udupi has written history of more than thousand years… Why talk nonsense on a public platform when you have no idea???
— Rakshit Shetty (@rakshitshetty) March 11, 2023