ಹೌದು ಇಡೀ ದೇಶವೇ ಕೋವಿಡ್ ವೈರಸಿಗೆ ತುತ್ತಾಗುತ್ತಿವೆ. ದಿನದಿಂದ ದಿನಕ್ಕೆ ಕೋವಿಡ್ ಪಾಸಿಟಿವ್ ಕೇಸ್ ಹೆಚ್ಚುತ್ತಿವೆ ಅದೇ ರೀತಿ ಸಾವುಗಳ ಸಂಖ್ಯೆಯು ದಿನದಿಂದ ದಿನಕ್ಕೆ ಅಧಿಕವಾಗಿದೆ.ಇದಕ್ಕೆಲ್ಲ ಮೂಲ ಕಾರಣ ಮಾನಸಿಕ ಆಘಾತವಾಗಿದೆ.ಹೆಚ್ಚಿನ ಜನರು ಕೋವಿಡ್ ಗೆ ಹೆದರಿ ವೈರಸನ್ನು ಮನಸ್ಸಿಗೆ ಹಚ್ಚಿಕೊಂಡಿದ್ದಾರೆ. ಕೋವಿಡ್ ಬರುವುದ್ದಕ್ಕಿಂತ ಮೊದಲು ಅದೆಷ್ಟೋ ರೋಗಿಗಳು ಆಸ್ಪತ್ರೆಗಳಲ್ಲಿ ಇತರ ರೋಗಗಳಿಗೆ ತುತ್ತಾಗಿ ಕೊನೆಯುಸಿರು ಎಳೆದಿಲ್ಲವೇ? ಅದೆಷ್ಟೋ ಕೋವಿಡ್ ಪಾಸಿಟಿವ್ ಬಂದ ಸಾಮಾನ್ಯ ರೋಗಿಗಳು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿಲ್ಲವೇ? ಇತರ ಕಾಯಿಲೆ ಇರುವ ಜನರು ಹೆಚ್ಚು ಮರಣ ಹೊಂದುವುದನ್ನು ನಾವುಗಳು ಕಾಣುತ್ತಿರುವುದು.ಕೋವಿಡ್ ವೈರಸಿನಿಂದ ಸಾವನ್ನಪ್ಪಿರುವುದು ಆಸ್ಪತ್ರೆಗಳ್ಳಲ್ಲಿ ಹೊರತು ಮನೆಯಲ್ಲಿ ತೀರಾ ಕಡಿಮೆ.ಇದಕ್ಕೆಲ್ಲ ಮುಖ್ಯ ಕಾರಣ ಆಸ್ಪತ್ರೆಗಳ ಪರಿಸರದ ವಾತಾವರಣ ಹಾಗೂ ಇದನ್ನೆಲ್ಲಾ ಗಮನಿಸಿ ಮನಸ್ಸಿಗೆ ಉಂಟಾಗುವ ಭಯ.
ಕೋವಿಡ್ ವೈರಸ್ ಸಮಾಜದಿಂದ ತೊಲಗಬೇಕಾದರೆ ನಾವುಗಳು ಸುರಕ್ಷಿತಾರಾಗಬೇಕು. ಸರಕಾರವು ಸೂಚಿಸಿರುವ ಮಾರ್ಗ ಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾದುದು ನಮ್ಮ ಕರ್ತವ್ಯ. ಇದನ್ನೆಲ್ಲ ಪಾಲಿಸಿದರೆ ವೈರಸ್ ನಮ್ಮಿಂದ ತೊಲಗಬಹುದು.
✍🏻ಇಫಾಝ್ ಬನ್ನೂರು