ಪುತ್ತೂರು : ಆರ್ಯಾಪು ಗ್ರಾ.ಪಂ.ಸದಸ್ಯರೊಬ್ಬರ ಮನೆಗೆ ನುಗ್ಗಿ ದಾಂಧಲೆ ಮಾಡಿದ ಇಬ್ಬರು ಯುವಕರನ್ನು ಪುತ್ತೂರು ಗ್ರಾಮಾಂತರ ಸಂಪ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರ್ಯಾಪು ಗ್ರಾ.ಪಂ.ಸದಸ್ಯ ಪವಿತ್ರ ರೈ ಅವರ ಮನೆಗೆ ನಿನ್ನೆ ರಾತ್ರಿ ವೇಳೆ ಇಬ್ಬರು ಯುವಕರು ನುಗ್ಗಿ ಗಲಾಟೆ ಮಾಡಿದ್ದು,ಈ ಸಂಬಂದ ಸ್ಥಳೀಯ ಇಬ್ಬರು ಯುವಕರನ್ನು ಸಂಪ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.