ಪುತ್ತೂರು: ಕಾರ್ಮಿಕ ದಿನಚಾರಣೆಯಂದೇ ಶಾಸಕ ಸಂಜೀವ ಮಠಂದೂರು ಹುಟ್ಟಿದ ದಿನವಾಗಿದ್ದರಿಂದ ಶಾಸಕ ಸಂಜೀವ ಮಠಂದೂರು ಅವರು ಬೆಳ್ಳಂಬೆಳಗ್ಗೆ ಪುತ್ತೂರು ಆನಂದ ಆಶ್ರಮ, ರಾಮಕೃಷ್ಣ ಸೇವಾ ಸಮಾಜ ಮತ್ತು ಇತರ ಸೇವಾಶ್ರಮಗಳಿಗೆ ತೆರಳಿ ಅಕ್ಕಿ ವಿತರಣೆ ಮಾಡಿ ಹುಟ್ಟಿದ ಹಬ್ಬವನ್ನು ವಿಶೇಷ ರೀತಿಯಲ್ಲಿ ಕೋವಿಡ್ ಮುನ್ನೆಚ್ಚರಿಕೆಯನ್ನು ಗಮನಿಸಿಕೊಂಡು ಆಚರಿಸಿದರು.
ಪುತ್ತೂರು ಆನಂದ ಆಶ್ರಮದಲ್ಲಿ ವೃದ್ಧರೊಂದಿಗೆ ಕೇಕ್ ಕಟ್ ಮಾಡಿ ಕೊರೋನಾ ಮುನ್ನೆಚ್ಚರಿಕೆ ಪಾಲಿಸಿಕೊಂಡು ಎಲ್ಲರು ಆರೋಗ್ಯವಂತರಾಗಿರಿ ಎಂದು ಹೇಳಿದ ಅವರು ಅಲ್ಲಿದ್ದ ವೃದ್ದರ ಕಾಲು ಮುಟ್ಟಿ ಅಶೀರ್ವಾದ ಪಡೆದರು. ನೆಲ್ಲಿಕಟ್ಟೆ ರಾಮಕೃಷ್ಣ ಸೇವಾ ಸಮಾಜದಲ್ಲೂ ಅಕ್ಕಿ ವಿತರಣೆ ಮಾಡಿ ಬಳಿಕ ಅಲ್ಲಿದ್ದ ಮಕ್ಕಳಿಗೆ ಸಿಹಿ ತಿಂಡಿ ಹಂಚಿ, ಪುಟಾಣಿ ಮಕ್ಕಳೊಂದಿಗೆ ಸ್ವಲ್ಪ ಹೊತ್ತು ಕಾಲ ಕಳೆದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ನಗರ ಯುವಮೋರ್ಚಾ ಅಧ್ಯಕ್ಷ ಸಚಿನ್ ಶೆಣೈ, ಸದಾಶಿವ ಪೈ, ಗಜಾನನ ಬಾಳಿಗ, ಭವಿನ್ ಶೇಟ್ ಉಪಸ್ಥಿತರಿದ್ದರು. ಬೆಳಿಗ್ಗೆ ಆನಂದ ಆಶ್ರಮ ಸೇವಾ ಟ್ರಸ್ಟ್ನ ಅಧ್ಯಕ್ಷೆ ಡಾ. ಗೌರಿ ಪೈ ಅವರ ಮನೆಗೆ ತೆರಳಿದ ಸಂಜೀವ ಮಠಂದೂರು ಅವರು ಅವರಿಂದ ಆಶೀರ್ವಾದ ಪಡೆದರು.