ಉಳ್ಳಾಲ : ಸೋಮೇಶ್ವರ ಬೀಚ್ ನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣ್ ಕುಮಾರ್ ಪುತ್ತಿಲ ಠಾಣೆಗೆ ಭೇಟಿ ನೀಡಿದ್ದು, ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಈ ವಿಚಾರದಲ್ಲಿ ಪಾರದರ್ಶಕವಾದಂತಹ ತನಿಖೆ ನಡೆಯಬೇಕೇಂಬುದು ನಮ್ಮೆಲ್ಲರ ಆಗ್ರಹ.., ಘಟನೆಯಲ್ಲಿದ್ದಂತಹ ಮೂರು ವಿದ್ಯಾರ್ಥಿಗಳ ಪೋಷಕರನ್ನು ಕರೆದು ವಾಸ್ತವಿಕ ವಿಚಾರ ಏನು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು ಹಾಗೆಯೇ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಪೊಲೀಸ್ ಅಧಿಕಾರಿಗಳು ಎಚ್ಚರಿಕೆಯನ್ನು ವಹಿಸಿಕೊಳ್ಳಬೇಕು.
ಆ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸುವುದು ಹಾಗೆಯೇ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ಘಟನೆಯ ಸತ್ಯಾಂಶ ಹೊರಬರಲಿದೆ. ಓರ್ವ ಯುವಕ ಮಾತ್ರ ಯುವತಿಗೆ ಪರಿಚಯವಿದ್ದು, ಇತರ ಇಬ್ಬರನ್ನು ಆತ ಕೇರಳದಿಂದ ಕರೆ ತಂದು ಯುವತಿಯರನ್ನು ಮತಾಂತರ ಮಾಡುವ ಹುನ್ನಾರವನ್ನು ಹೊಂದಿದ್ದ ಎಂಬ ಬಗ್ಗೆ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಘಟನೆಯ ಬಗ್ಗೆ ಸರಿಯಾದ ತನಿಖೆ ನಡೆಯಬೇಕು.
ವಿಚಾರಣೆಯ ವಿಚಾರವಾಗಿ ಕಾರ್ಯಕರ್ತರಿಗೆ ತೊಂದರೆಯನ್ನು ನೀಡಬಾರದು. ಹಾಗೆಯೇ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು.. ಇಂತಹ ಘಟನೆಗಳು ನಡೆದಲ್ಲಿ ಪೊಲೀಸರಿಗೆ ಮಾಹಿತಿ ಅವರ ಮೂಲಕ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲರು ಸಾಮಾಜಿಕ ಬದ್ಧತೆಯಿಂದ ಬದುಕು ನಡೆಸೋಣ ಎಂದರು.