ಪುತ್ತೂರು : ಶಾಸಕರ ವಾರ್ ರೂಂ ಕೋವಿಡ್ ನಿರ್ವಹಣಾ ಸಮಿತಿ ಸಭೆಯು ಭಾಜಪಾ ಕಛೇರಿಯಲ್ಲಿ ನಡೆಯಿತು.
ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಸಿದ್ಧಪಡಿಸಿರುವ 26 ಬೆಡ್ ಗಳು ಭರ್ತಿಯಾಗಿದ್ಥು ಮತ್ತೆ16 ಬೆಡ್ ಗಳನ್ನು ವ್ಯವಸ್ಥೆ ಮಾಡಲಾಗಿದೆ.ಪ್ರಸ್ತುತ 7 ರೋಗಿಗಳಿಗೆ ಆಕ್ಸಿಜನ್ ಅವಶ್ಯಕತೆಯಿದ್ದು 34 ಆಕ್ಸಿಜನ್ ಸಿಲಿಂಡರ್ ಗಳು ಆಸ್ಪತ್ರೆಯಲ್ಲಿ ದಾಸ್ತಾನಿವೆ ಎಂಬ ಮಾಹಿತಿಯನ್ನು ಸಭೆಯಲ್ಲಿ ನೀಡಲಾಯಿತು.
ಆಂಬ್ಯುಲೆನ್ಸ್, ಸಹಾಯವಾಣಿ ಕೇಂದ್ರ,ಆಯುಷ್ಮಾನ್ ಭಾರತ್,ತುರ್ತುವಾಹನ,ಆಸ್ಪತ್ರೆಗಳ ಮಾಹಿತಿ ಪ್ರಮುಖರು ಮಾಹಿತಿ ನೀಡಿದರು.1000ವ್ಯಾಕ್ಸೀನ್ ಸಂಜೆ ಪುತ್ತೂರಿಗೆ ತಲುಪಲಿದ್ದುಎರಡನೇ ಲಸಿಕೆ ಪಡೆದುಕೊಳ್ಳುವವರಿಗೆ ಪ್ರಥಮ ಆದ್ಯತೆಯಿದ್ದು70:30 ರೀತಿಯಲ್ಲಿ ವಿತರಣೆಮಾಡಲು ಸರ್ಕಾರದ ಆದೇಶ ಇರುವ ಬಗ್ಗೆ ತಿಳಿಸಲಾಯಿತು.
ಸಭೆಯಲ್ಲಿ ಪಿ.ಜಿ.ಜಗನ್ನೀವಾಸ ರಾವ್, ರಾಜೇಶ್ ಬನ್ನೂರು, ಚಂದ್ರ ಶೇಖರ್ ರಾವ್ ಬಪ್ಪಳಿಗೆ, ಹರಿಪ್ರಸಾದ್ ಯಾದವ್, ಪುರುಷೋತ್ತಮ ಮುಂಗ್ಲಿಮನೆ, ಡಾ. ಪ್ರಸನ್ನ, ಯುವರಾಜ್ ಪೆರಿಯತ್ತೋಡಿ, ರಾಮದಾಸ್ ಹಾರಾಡಿ, ಕಿರಣ್ ಶಂಕರ ಮಲ್ಯ, ಶಿವಕುಮಾರ್ ಪಿ. ಬಿ, ರಫೀಕ್ ದರ್ಬೆ, ರಾಘವೇಂದ್ರ ಪ್ರಭು, ಅಶೋಕ್ ಹಾರಾಡಿ, ವಸಂತ ವೀರಮಂಗಲ, ವಿಶ್ವನಾಥ ಕುಲಾಲ್, ಅಭಿಜಿತ್ ಕೊಡಿಪ್ಪಾಡಿ, ನವೀನ್ ಪಡ್ನೂರು, ರುಕ್ಮಯ್ಯ ಇದ್ಪಾಡಿ ಉಪಸ್ಥಿತರಿದ್ದರು.