ಐಪಿಎಲ್ನಲ್ಲಿ ಹಲವು ಆಟಗಾರರಿಗೆ ಮತ್ತು ಸಪೋರ್ಟ್ ಸ್ಟಾಫ್ಗೆ ಸೋಂಕು ತಗುಲಿದ ಬೆನ್ನಲ್ಲೇ ಐಪಿಎಲ್-2021 ಟೂರ್ನಿಯನ್ನು ಬಿಸಿಸಿಐ ರದ್ದು ಮಾಡಿದೆ.ಈ ಬಗ್ಗೆ ಬಿಸಿಸಿಐ ಉಪ ನಿರ್ದೇಶಕ ರಾಜೀವ್ ಶುಕ್ಲಾ ಮಾಹಿತಿ ನೀಡಿದ್ದಾರೆ.
ನಿನ್ನೆ ತಾನೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರಾದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ಗೆ ಕೊರೊನಾ ಪಾಸಿಟಿವ್ ಆಗಿತ್ತು. ಜೊತೆಗೆ ದೆಹಲಿ ಆಟಗಾರರು ಕೂಡ ಸೋಂಕು ಆತಂಕ ಹಿನ್ನೆಲೆಯಲ್ಲಿ ಐಸೋಲೇಟ್ ಆಗಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಎಲ್. ಬಾಲಾಜಿ ಕೂಡ ಸೋಂಕಿಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಸಿಎಸ್ಕೆ ತಂಡವನ್ನು ಐಸೋಲೇಟ್ ಮಾಡಲಾಗಿತ್ತು.ಉಳಿದಂತೆ ಕೋಲ್ಕತ್ತಾ ತಂಡದ ಸಂದೀಪ್ ವಾರಿಯರ್, ವರುಣ್ ಚಕ್ರವರ್ತಿ ಅವರ ಪಾಸಿಟಿವ್ ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಕೋಲ್ಕತ್ತಾ ತಂಡದ ಎಲ್ಲಾ ಆಟಗಾರರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು.
ಇನ್ನು ಇಂದು ನಡೆಯಬೇಕಿದ್ದ ಮುಂಬೈ ಹಾಗೂ ಹೈದರಾಬಾದ್ ಪಂದ್ಯಕ್ಕೂ ಮುನ್ನ ನಡೆಸಲಾಗಿದ್ದ ಕೋವಿಡ್ ಪರೀಕ್ಷೆಯಲ್ಲಿ ಹೈದರಾಬಾದ್ ತಂಡದ ಆಟಗಾರನಿಗೆ ಕೋವಿಡ್ ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಮಹತ್ವದ ನಿರ್ಧಾರ ಪ್ರಕಟಿಸಿದೆ.