ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿರುವ 5000 ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷೆಗೆ , ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ 80 ಹುದ್ದೆಗಳ ನೇಮಕಾತಿ ಪರೀಕ್ಷೆಗೆ, ಕ್ಯಾಂಪ್ಕೋ ಸಂಸ್ಥೆಯ ನೇಮಕಾತಿ ಪರೀಕ್ಷೆ,ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳ ಪೂರ್ವ ತಯಾರಿಯ ಆನ್ಲೈನ್ ತರಗತಿಗಳನ್ನು ವಿದ್ಯಾಮಾತ ಅಕಾಡೆಮಿಯು ಪ್ರಾರಂಭಿಸಿದೆ.
ಕೋವಿಡ್-19ಗೆ ಸಂಬಂಧಿಸಿದಂತೆ, ಸರಕಾರದ ನಿಯಾಮವಳಿಗಳ ಪ್ರಕಾರ ಈ ಎಲ್ಲಾ ತರಬೇತಿಗಳನ್ನು ಆನ್ಲೈನ್ ಮುಖಾಂತರ ನಡೆಸಲಾಗುತ್ತಿದೆ.ಸದ್ಯ ಈ ಮೇಲ್ಕಂಡ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಿದವರು,ಮುಂದೆ ಅರ್ಜಿ ಸಲ್ಲಿಸಲು ಯೋಜನೆ ಹಾಕಿಕೊಂಡಿರುವವರು ಈ ಆನ್ಲೈನ್ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡು ಸರಕಾರಿ ಉದ್ಯೋಗದ ಕನಸನ್ನು ನನಸಾಗಿಸಿಕೊಳ್ಳಬಹುದು.
ಓದು ಮುಗಿಸಿರುವವರು ಅಥವಾ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವವರು ಈ ಆನ್ಲೈನ್ ತರಗತಿಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ತರಗತಿಗೆ ಪ್ರವೇಶಾತಿ ಪಡೆಯುವವರಿಗೆ ಆನ್ಲೈನ್ ಅರ್ಜಿ ಸಲ್ಲಿಕೆ, ಸೂಕ್ತ ದಾಖಲಾತಿಗಳ ಸಲ್ಲಿಕೆ,ಪರೀಕ್ಷಾ ಮಾರ್ಗಸೂಚಿಗಳ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ ಮತ್ತು ನೇಮಕಾತಿ ಪರೀಕ್ಷೆಗಳ ಅವಶ್ಯವಿರುವ ಭಾಷಾಂತರ ,ಪ್ರಬಂಧ ರಚನೆ, ಸಂಕ್ಷಿಪ್ತ ಬರವಣಿಗೆ,ಪ್ರಚಲಿತ ವಿದ್ಯಮಾನ, ಮಾನಸಿಕ ಸಾಮರ್ಥ್ಯ,ವಿಜ್ಞಾನ ಮತ್ತು ತಂತ್ರಜ್ಞಾನ, ಭೂಗೋಳ,ಅರ್ಥಶಾಸ್ತ್ರ, ಕಾನೂನು ಮತ್ತು ಸಂವಿಧಾನ,ಇಂಗ್ಲಿಷ್ ,ಕನ್ನಡ ಸಹಕಾರ ತತ್ವಗಳು ಇತ್ಯಾದಿ ವಿಷಯಗಳ ಬಗ್ಗೆ ತರಗತಿಗಳು ನಡೆಯಲಿವೆ ಎಂದು ವಿದ್ಯಾಮಾತ ಫೌಂಡೇಶನ್ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೂಕ್ತ ಮಾರ್ಗದರ್ಶನ ಮತ್ತು ಪ್ರವೇಶಾತಿಗೆ ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನ ಸಂಪರ್ಕಿಸಬಹುದು.
9620468869/9148935808