ಪುತ್ತೂರು : ‘ಪ್ರಭು ಚರುಂಬುರಿ’ ವತಿಯಿಂದ ಕೊಂಬೆಟ್ಟು ಬಂಟರ ಭವನದ ಬಳಿಯ ಜಿ.ಎಲ್ ಟ್ರೇಡ್ ಸೆಂಟರ್ ನ ಮಹಡಿಯಲ್ಲಿ ‘ಚರುಂಬುರಿ ಹಬ್ಬ’ಕ್ಕೆ ಚಾಲನೆ ನೀಡಲಾಗಿದ್ದು, ಆ.12-15ರವರೆಗೆ ಸಂಜೆ 4 ರಿಂದ 10ರ ವರೆಗೆ ಚರುಂಬುರಿ ಹಬ್ಬ ನಡೆಯಲಿದೆ.

ಭಟ್ ಅಂಡ್ ಭಟ್ ಯೂಟ್ಯೂಬ್ ವಾಹಿನಿಯ ಸ್ಥಾಪಕ ಸುದರ್ಶನ್ ಭಟ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದರು.

ಕಾರ್ಯಕ್ರಮದಲ್ಲಿ ಪುತ್ತೂರಿನ ಡಾ. ಶಿವರಾಮ ಭಟ್ ಕ್ಲಿನಿಕ್ ನ ಕಂಪೌಂಡರ್ ನರಸಿಂಹ ಭಟ್ ಅವರಿಗೆ ಸನ್ಮಾನ ನಡೆಯಿತು.

ಚರುಂಬುರಿ ಹಬ್ಬದಲ್ಲಿ 15 ಬಗೆಯ ಚರುಂಬುರಿ..:
ಜಿಂಜರ್ ಗಾರ್ಲಿಕ್, ರಾಕೆಟ್, ನಾರ್ಮಲ್, ಗರಿಗರಿ, ರಾಜಾ ಸ್ಪೆಷಲ್, ಆಲು ಸೇರಿದಂತೆ 15 ಬಗೆಯ ಚರುಂಬುರಿ, ಅಲ್ಲದೇ ಇಪ್ಪತ್ತು ರೂಪಾಯಿಂದ ಐವತ್ತು ರೂ. ವರೆಗಿನ ಚರುಂಬುರಿಗಳು ಇಲ್ಲಿ ದೊರೆಯುತ್ತವೆ.

ಹಳೆಕಾಲದಲ್ಲಿ ಚರುಂಬುರಿ ಮಾಡುತ್ತಿದ್ದ ವಿಧಾನ ಹಾಗೂ ಆಗಿನ ರುಚಿಯ ಚರುಂಬುರಿಯನ್ನು ಈಗಿನವರಿಗೆ ಒದಗಿಸುವ ಪ್ರಯತ್ನ ಈ ಬಾರಿಯ ಚರುಂಬುರಿ ಹಬ್ಬದಲ್ಲಿ ನಡೆದಿದೆ.
