ಪುತ್ತೂರು : ವ್ಯಕ್ತಿಯೋರ್ವರು ಹೃದಯಾಘಾತದಿಂದಾಗಿ ನಿಧನರಾದ ಘಟನೆ ಸಂಪ್ಯ ಸಮೀಪ ನಡೆದಿದೆ.
ಸಂಪ್ಯ ಕಂಬಳದಡ್ಡ ನಿವಾಸಿ ಸೀತಾರಾಮ ಶೆಟ್ಟಿ (47) ಮೃತರು.

ಸೀತಾರಾಮ ಶೆಟ್ಟಿ ರವರು ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದು, ಪುತ್ತೂರು ತಾಲೂಕು ಯುವ ಬಂಟರ ಸಂಘದ ಮಾಜಿ ಅಧ್ಯಕ್ಷರಾಗಿದ್ದರು.
ಧಾರ್ಮಿಕ ಹಾಗೂ ಕಂಬಳ, ಜೇಸಿಐ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು.
ನೈತ್ತಾಡಿಯ ಕಲ್ಲಗುಡ್ಡೆ ಎಂಬಲ್ಲಿ ಬಾರ್ & ರೆಸ್ಟೋರೆಂಟ್ ನ್ನು ನಿರ್ವಹಣೆ ಮಾಡುತ್ತಿದ್ದ ಸೀತಾರಾಮ ಶೆಟ್ಟಿ ಎಂದಿನಂತೆ ಆ.23 ರಂದು ಬಾರ್ & ರೆಸ್ಟೋರೆಂಟ್ ಗೆ ಬಂದಿದ್ದ ವೇಳೆ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರು ಪತ್ನಿ, ಮಕ್ಕಳು, ಸಹೋದರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.


























