ಪುತ್ತೂರು : ತಮ್ಮ ಫೋಟೋವನ್ನು ಬೇರೆ ಹುಡುಗಿಯ ಫೋಟೋ ಜೊತೆ ಸೇರಿಸಿ ವೈರಲ್ ಮಾಡುತ್ತಿರುವುದಾಗಿ ಆರೋಪಿಸಿ ಕೈಕಾರ ಪನಡ್ಕ ನಿವಾಸಿ ನವೀನ್ ರೈ ಎಂಬವರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನವೀನ್ ರೈ ಕೈಕಾರ ದಿನೇಶ್ ಪುತ್ತೂರು ಎಂಬವರ ವಿರುದ್ಧ ದೂರು ನೀಡಿದ್ದಾರೆ.
ಪುತ್ತಿಲ ಪರಿವಾರ-1 ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ದಿನೇಶ್ ಪುತ್ತೂರು ಎಂಬವರು ಬೇರೆ ಹುಡುಗಿಯ ಜೊತೆ ನವೀನ್ ರೈ ಅವರ ಫೋಟೋವನ್ನು ಸೇರಿಸಿ ಹರಿಬಿಟ್ಟಿದ್ದು, ಮಾನಹಾನಿ ಮಾಡುತ್ತಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.