ಉಳ್ಳಾಲ : ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವತೆಗಳನ್ನು ನಿಂದಿಸಿ ಆಡಿಯೋ ಒಂದನ್ನು ಹರಿಯ ಬಿಟ್ಟಿದ್ದ ಚೆಂಬುಗುಡ್ಡೆ ನಿವಾಸಿ, ಸ್ವಾಲಿಝ್ ಇಕ್ಬಾಲನ್ನ ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತೊಕ್ಕೊಟ್ಟಿನ ಚೆಂಬುಗುಡ್ಡೆಯಲ್ಲಿ ಈ ಹಿಂದೆ ಸ್ವಾಲಿಝ್ ಕಿಚನ್ ಸೆಂಟರ್ ಎಂಬ ಮಳಿಗೆ ನಡೆಸುತ್ತಿದ್ದ. ಇಕ್ಬಾಲ್ ಸ್ಕೀಮ್ ಗಳನ್ನು ಆರಂಭಿಸಿ ಆಕರ್ಷಕ ಬಹುಮಾನಗಳ ಆಮಿಷ ತೋರಿಸಿ ಅನೇಕ ಗ್ರಾಹಕರಿಗೆ ಉಂಡೆನಾಮ ಹಾಕಿದ್ದನೆನ್ನಲಾಗಿದೆ.
ಕೆಲ ತಿಂಗಳ ಹಿಂದೆ ಹಿಂದು ದೇವತೆಗಳನ್ನು ತುಚ್ಚವಾಗಿ ನಿಂದಿಸಿದ ಆಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಇಕ್ಬಾಲ್ ಹರಿಯಬಿಟ್ಟಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಳ್ಳಾಲ ಪೊಲೀಸರು ಇಕ್ಬಾಲ್ ಬಂಧನಕ್ಕಾಗಿ ಶೋಧ ಕಾರ್ಯದಲ್ಲಿದ್ದರು. ಇಂದು ಬೆಳಗ್ಗೆ ಚೆಂಬುಗುಡ್ಡೆಯ ಮನೆಯಲ್ಲಿದ್ದ ಇಕ್ಬಾಲ್ ನನ್ನು ಉಳ್ಳಾಲ ಪಿಐ ಸಂದೀಪ್ ಅವರ ನೇತೃತ್ವದ ತಂಡ ವಶಕ್ಕೆ ಪಡೆದಿದೆ.