ದೇಶವ್ಯಾಪಿ ಕೊರೊನಾ ಘರ್ಜಿಸುತ್ತಿದೆ, ದಿನೇ ದಿನೇ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಈ ಸಂದರ್ಭದಲ್ಲಿ ಕೇರಳ,ತಮಿಳುನಾಡು, ಆಂಧ್ರದಲ್ಲೆಲ್ಲ ಜನ ಸಾಮಾನ್ಯರಿಗೇ, ಮಧ್ಯಮ ವರ್ಗಗಳಿಗೆ ಹೆಚ್ಚೆಚ್ಚು ಸಹಕಾರವನ್ನು ಸರಕಾರ ನೀಡುತ್ತಿದ್ದು, ಆಹಾರ ಸಾಮಾಗ್ರಿಗಳು ಹಾಗೂ ಬೇರೆ ಬೇರೆ ರೀತಿಯಲ್ಲಿ ಜನರನ್ನು ಸಹಕರಿಸಿ ಜನರನ್ನು ಆಧರಿಸುತ್ತಿದೆ. ಆದರೆ ಕರ್ನಾಟಕದಲ್ಲಿ ಹಾಗೇ ಆಗಿಲ್ಲ ಸರಕಾರ ಹಾಗೇ ಮಾಡಬೇಕು ನಮ್ಮಲ್ಲೂ ಕೂಡಾ ಬಡವರಿಗೇ, ಮಧ್ಯಮ ವರ್ಗದವರಿಗೇ ಹೆಚ್ಚಿನ ಸಹಕಾರವನ್ನು ನೀಡಬೇಕು ಜೊತೆಗೆ ರಾಜ್ಯದಲ್ಲಿ ಕೃಷಿ ಸಾಲ ಮನ್ನಾ, ಬೇರೆ ಕೆಲವು ಸಾಲಗಳನ್ನು ಮನ್ನಾ ಮಾಡಿದ್ರೂ ಆದ್ರೇ ಸ್ವಸಹಾಯ ಸಂಘಗಳು , ಸ್ತ್ರೀ ಶಕ್ತಿ ಸಂಘಗಳಿಂದ ತೆಗೆದಂತಹ ಸಾಲಕ್ಕೆ ಯಾವುದೇ ರಿಯಾಯಿತಿಯನ್ನು ನೀಡಿಲ್ಲ, ಸ್ತ್ರೀ ಶಕ್ತಿ ಸಂಘದ ಸಾಲಕ್ಕೆ ಇಂದೊಮ್ಮೆ ಸರಕಾರ ಬಡ್ಡಿ ರಹಿತವಾಗಿಸಿ ಘೋಷಣೆ ಮಾಡಿತ್ತು.
ಈಗ ನಾನು ಸರಕಾರಕ್ಕೆ ಒತ್ತಾಯ ಮಾಡುವುದೆನೆಂದರೇ “ಯಾವುದೇ ಸ್ವ ಸಹಾಯ ಗುಂಪುಗಳಿರ ಬಹುದು, ಸೊಸೈಟಿ ಬ್ಯಾಂಕ್ ಮುಖಾಂತರ ತೆಗೆದ ಸಾಲವಿರಬಹುದು,ಧರ್ಮಸ್ಥಳ ಸ್ವ ಸಹಾಯ ಸಂಘದ ಮುಖಾಂತರ ಅಥವಾ ಯಾವುದೇ ರೀತಿಯ ಸ್ವ ಸಹಾಯ ಗುಂಪುಗಳಿಂದ ತೆಗೆದಂತಹ ಸಾಲಕ್ಕೆ ಬಡ್ಡಿ ಮನ್ನಾ ಮಾಡಬೇಕು ಮತ್ತು ಕನಿಷ್ಠ ಮೂರರಿಂದ ಆರು ತಿಂಗಳು ಕಂತು ಕಟ್ಟಲು ರಿಯಾಯಿತಿ ನೀಡಬೇಕು” ಎಂದು ಹೇಳಿ ಸರಕಾರ ಆದೇಶಿಸಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತಿದ್ದೇನೆ.
ಹೆಚ್ಚಿನ ಹೆಣ್ಣು ಮಕ್ಕಳು ಸ್ವ ಸಹಾಯದಿಂದ ಸಾಲ ಪಡೆದು ಅದನ್ನು ಸಂಸಾರಕ್ಕೆ ಹಾಕಿ ಕಷ್ಟ ಪಡುವವರಾದ ಕಾರಣ, ಯುವತಿಯರ, ಮಹಿಳೆಯರ ಕಷ್ಟ ಪರಿಹರಿಸುವುದಕ್ಕಾಗಿ ಸರಕಾರ ಇಷ್ಟಾದರೂ ಸಹಾಯ ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತಿದ್ದೇನೆ. ಸಾರ್ವಜನಿಕರು ಮಾಸ್ಕ್ ನ್ನು ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ.ಮನೆಯಲ್ಲಿಯೇ ಇರಿ ಸುರಕ್ಷಿತವಾಗಿರಿ. ಅಧಿಕಾರಿಗಳು ಜನರ ಮೇಲೆ ಕೇಸ್ ಗಳನ್ನು ಹಾಕಿ ದಬ್ಬಾಳಿಕೆ ಮಾಡುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆಗೊಳಿಸಿ ಜನರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಬೇಕು..
🖋️.ಶಕುಂತಲಾ ಟಿ. ಶೆಟ್ಟಿ, ಮಾಜಿ ಶಾಸಕರು, ಪುತ್ತೂರು ವಿಧಾನ ಸಭಾ ಕ್ಷೇತ್ರ