ಪುತ್ತೂರು: ನಿರಂತರ ಸುರಿದ ಮಳೆಗೆ ಪರ್ಲಡ್ಕ ಪಾಂಗ್ಲಾಯಿ ಸಮೀಪ ತಡೆಗೋಡೆಯೊಂದು ಕುಸಿದು ಬಿದ್ದ ಘಟನೆ ಮೇ 16ರಂದು ಬೆಳಿಗ್ಗೆ ನಡೆದಿದೆ.
ಪಾಂಗ್ಲಾಯಿ ಶೇಷಪ್ಪ ಪೂಜಾರಿ ಅವರ ಮನೆಗೆ ಹೋಗುವ ದಾರಿಯ ಇಂಟರಾಲ್ ಹಾಕಿದ ರಸ್ತೆಯಲ್ಲಿ ಇತ್ತೀಚೆಗೆ ಎಡಿಬಿಪಿ ನೀರಿನ ಪೈಪ್ ಅಳವಡಿಸಿದ ಜಾಗದಲ್ಲಿ ಮಣ್ಣು ಸಡಿಲಗೊಂಡು ತಡೆಗೋಡೆ ಕುಸಿದಿದೆ.
ಘಟನಾ ಸ್ಥಳಕ್ಕೆ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಕಯುಐಡಿಎಫ್‌ಸಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಾಂತೇಶ್ ಅವರು ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಹೆಚ್ಚಿನ ಅನಾಹುತ ಆಗದಂತೆ ತುರ್ತಾಗಿ ಮರಳಿನ ದಿಬ್ಬ ಇಡುವುದಾಗಿ ಇಂಜಿನಿಯರ್ ತಿಳಿಸಿದ್ದಾರೆ.