ವಿಟ್ಟ : ವಿಟ್ಠಲ ಎಜುಕೇಶನ್ ಸೊಸೈಟಿಯ ಪ್ರೌಢಶಾಲಾ ವಿಭಾಗದಲ್ಲಿ ಅಧ್ಯಾಪಕರಾಗಿದ್ದ ಸಂಕಪ್ಪ ಗೌಡ ರವರು ನಿವೃತ್ತರಾಗಿದ್ದು, ಬೀಳ್ಕೊಡುಗೆ ಸಮಾರಂಭ ಶಾಲೆಯ ಸಭಾಭವನದಲ್ಲಿ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು.

ಸಂಚಾಲಕ ಎಲ್ ಎನ್ ಕೂಡೂರು, ಉಪಾಧ್ಯಕ್ಷ ಅಲ್ಫಾನ್ಸ್ ಸಿಲ್ವೆಸ್ಟರ್ ಮಸ್ಕರೇನಸ್, ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಕೋಶಾಧಿಕಾರಿ ಬಾಬು ಕೊಪ್ಪಳ, ಆಡಳಿತ ಅಧಿಕಾರಿ ಪ್ರಶಾಂತ್ ಚೊಕ್ಕಾಡಿ, ಸದಸ್ಯರುಗಳಾದ ನಿತ್ಯಾನಂದ ನಾಯಕ್, ಸದಾಶಿವ ಬನ ಮತ್ತು ಪದ್ಮಯ್ಯ ಗೌಡ, ಪ್ರಿನ್ಸಿಪಾಲ್ ಆದರ್ಶ ಚೊಕ್ಕಾಡಿ, ಐಟಿಐ ಪ್ರಿನ್ಸಿಪಾಲ್ ರಮೇಶ್ ರೈ, ಕಾರ್ಯದರ್ಶಿ ಶ್ರೀಪ್ರಕಾಶ್, ಶಾಲಾ ಉಪ ಪ್ರಿನ್ಸಿಪಾಲ್ ಕಿರಣ್ ಕುಮಾರ್ ಬ್ರಹ್ಮಾವರ್, ನಿವೃತ್ತರ ಪತ್ನಿ ಶೀಲಾವತಿ, ಸಹ ಅಧ್ಯಾಪಕರು, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು.
ರಮೇಶ್ ಸ್ವಾಗತಿಸಿದರು, ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ವಂದಿಸಿದರು. ಶ್ರೀಹರಿ ಶರ್ಮ ನಿರೂಪಿಸಿದರು.



























