ನಿನ್ನೆ ರಾತ್ರಿ ದೀಢೀರ್ ರಕ್ತದೊತ್ತಡ ಕುಸಿತಕ್ಕೊಳಗಾಗಿ ಮಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಕೂಜುಗೋಡು ಕಟ್ಟೆಮನೆ ಮನೆತನದ ಪ್ರತೀಕ್ಷಾರವರು ಬೆಂಗಳೂರಿನಲ್ಲಿ ಸಾವಿಗೀಡಾದ ಘಟನೆ ವರದಿಯಾಗಿದೆ.
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ದಿನೇಶ್ ಕೂಜುಗೋಡು ಕಟ್ಟೆಮನೆಯವರ ೨ನೇ ಪುತ್ರಿ ಪ್ರತೀಕ್ಷಾ (21 ವರ್ಷ) ಮಂಗಳೂರಿನ ಶ್ರೀನಿವಾಸ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದಳು. ಬೆಂಗಳೂರಿನ ಮನೆಗೆ ಹೋಗಿದ್ದ ಅವರು ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ದಿಢೀರ್ ಲೋಬಿಪಿಗೆ ಒಳಗಾಗಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.