ಮಂಗಳೂರು : ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿ ಅಬುಧಾಬಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜುಲೈ 22 ರಿಂದ ಪ್ರತಿ ದಿನ ವಿಮಾನ ಸಂಚಾರ ಆರಂಭಿಸಲಿದೆ.
ಪ್ರಸ್ತುತ ಏರ್ ಇಂಡಿಯಾ ಎಕ್ಸ್‌ಪ್ರೆಸ್ (IX) ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರದಂದು ಅಬುಧಾಬಿಗೆ ವಾರದಲ್ಲಿ 4 ವಿಮಾನಗಳ ಸಂಚಾರ ನಿರ್ವಹಿಸುತ್ತಿದೆ.
ಇಂಡಿಗೋ (4) ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ IX (1) ಪ್ರಸ್ತುತ ಬೆಂಗಳೂರು-ಮಂಗಳೂರು ಸೆಕ್ಟರ್‌ನಲ್ಲಿ ಪ್ರತಿದಿನ ಒಟ್ಟು 5 ವಿಮಾನಗಳನ್ನು ನಿರ್ವಹಿಸುತ್ತಿವೆ. ಜುಲೈ 8ರಿಂದ ಈ ವಲಯದಲ್ಲಿ ದೈನಂದಿನ ವಿಮಾನಗಳ ಸಂಚಾರ 6ಕ್ಕೆ ಹೆಚ್ಚಳವಾಗಲಿದೆ. ಅಂದಿನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ IX ತನ್ನ ಎರಡನೇ ದೈನಂದಿನ ಸಂಚಾರ ಪುನರಾರಂಭಿಸಲಿದೆ. ಈ ಸಂಖ್ಯೆಯು ಜುಲೈ 22 ರಿಂದ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು 7 ಕ್ಕೆ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಬೆಂಗಳೂರು ಹಾಗೂ ಮಂಗಳೂರು ಮಧ್ಯೆ ಸಂಚರಿಸುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ IX ಮುಂದೆ ಸಂಪೂರ್ಣ ದೇಶೀಯ ವಿಮಾನವಾಗಿ ಬದಲಾಗಲಿದೆ. ಅಬುಧಾಬಿಗೆ ತೆರಳುವ ಪ್ರಯಾಣಿಕರು ಮಂಗಳೂರಿನಿಂದ ಪ್ರತಿ ದಿನದ ಏರ್ ಇಂಡಿಯಾ ಎಕ್ಸ್‌ಪ್ರೆಸ್ IX ವಿಮಾನ ಏರಲಿದ್ದಾರೆ.
ಆಗಸ್ಟ್ 1 ರಿಂದ, ಬೆಂಗಳೂರು ಹಾಗೂ ಮಂಗಳೂರು ಮಧ್ಯೆ ವಾರದಲ್ಲಿ ಮೂರು ದಿನಗಳಲ್ಲಿ (ಕ್ರಮವಾಗಿ ಸೋಮವಾರ, ಬುಧವಾರ ಮತ್ತು ಶುಕ್ರವಾರ) ಸಂಚರಿಸುವ ವಿಮಾನಗಳ ಸಂಖ್ಯೆ 8 ಕ್ಕೆ ಏರಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ IX ತನ್ನ ಎರಡು ದೈನಂದಿನ ವಿಮಾನಗಳೊಂದಿಗೆ ಮೂರನೇ ವಿಮಾನವನ್ನು ಆರಂಭಿಸಲಿದೆ.
ಸದ್ಯ ಮಾರ್ಚ್ 31 ರಿಂದ ಪ್ರಾರಂಭವಾಗುವ ಬೇಸಿಗೆ ವೇಳಾಪಟ್ಟಿಯಲ್ಲಿ ಘೋಷಿಸಿದ ಐದನೇ ವಿಮಾನ ಸೇರಿದಂತೆ ಇಂಡಿಗೋ 5 ದೈನಂದಿನ ವಿಮಾನಗಳನ್ನು ನಿರ್ವಹಿಸುತ್ತದೆ.
ಪ್ರಸ್ತುತ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಯಾನ ಸಂಸ್ಥೆಗಳು ಮುಂಬೈ ಮತ್ತು ಬೆಂಗಳೂರಿಗೆ ಪ್ರತಿ ದಿನ 5 ವಿಮಾನಗಳು, ಚೆನ್ನೈ ಮತ್ತು ಹೈದರಾಬಾದ್‌ಗೆ ಕ್ರಮವಾಗಿ ಪ್ರತಿ ದಿನ 2 ವಿಮಾನಗಳು, ದೆಹಲಿಗೆ ಪ್ರತಿ ದಿನ ಒಂದು ವಿಮಾನ, ಪುಣೆಗೆ ವಾರಕ್ಕೆ 3 ವಿಮಾನಗಳು ಮತ್ತು ತಿರುಚಿರಾಪಳ್ಳಿಗೆ ವಾರಕ್ಕೆ 1 ವಿಮಾನ ಕಾರ್ಯಾಚರಣೆ ನಡೆಸುತ್ತಿವೆ.
ಮಂಗಳೂರಿನಿಂದ ಅಂತರ್ರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯು ಏರ್ ಇಂಡಿಯಾ ಮೂಲಕ ದುಬೈಗೆ ಪ್ರತಿ ದಿನ 2 ವಿಮಾನಗಳು ಮತ್ತು ಇಂಡಿಗೋದಿಂದ ವಾರಕ್ಕೆ 4 ವಿಮಾನಗಳು, ದಮ್ಮಾಮ್‌ಗೆ ವಾರಕ್ಕೆ 4 ವಿಮಾನಗಳು, ವಾರಕ್ಕೆ 3 ಮಸ್ಕತ್‌ಗೆ, ವಾರಕ್ಕೆ 2 ವಿಮಾನ ದೋಹಾ ಮತ್ತು ಬಹ್ರೇನ್‌ಗೆ ಮತ್ತು ವಾರಕ್ಕೊಮ್ಮೆ ಏರ್ ಇಂಡಿಯಾದ 1 ವಿಮಾನ ಕುವೈತ್ ಮತ್ತು ಜೆಡ್ಡಾಕ್ಕೆ ಸಂಚಾರ ನಡೆಸುತ್ತಿವೆ.