ಬೆಟ್ಟಂಪಾಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಮಾನವಿಕ ಸಂಘ ಹಾಗೂ ರಾ. ಸೇ. ಯೋಜನೆಯ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ‘ಬೌದ್ಧಿಕ ಆಸ್ತಿ ಹಕ್ಕು’ ಎಂಬ ವಿಷಯದ ಕುರಿತು ಗೂಗಲ್ ಮೀಟ್ ಮುಖಾಂತರ ಆನ್ಲೈನ್ ವೆಬಿನಾರ್ ಅನ್ನು ಜೂ.3 ರಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಶೈಕ್ಷಣಿಕ ಮಟ್ಟದಲ್ಲಿ ಕಲಿಕೆಗೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಆಗುತ್ತಿರುವ ಬದಲಾವಣೆಗಳ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳಲ್ಲಿ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಆಸಕ್ತಿ ಇರಬೇಕು ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳು ಪುತ್ತೂರಿನ ಹಿರಿಯ ವಕೀಲರಾದ ಕೆ. ಆರ್ ಆಚಾರ್ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಮ್ಮೆಲ್ಲರಲ್ಲೂ ಜ್ಞಾನದ ಹಸಿವು ಇರಬೇಕು. ನಾವು ಪ್ರತಿನಿತ್ಯ ಹೊಸದಾದ ವಿಷಯಗಳನ್ನು ಕಲಿಯಬೇಕು ಎಂದರು. ವಿದೇಶಿ ಅನುಕರಣೆ ಹಾಗೂ ವಿದೇಶಿ ವಸ್ತುಗಳ ಮೇಲಿನ ಮೋಹ ಕಡಿಮೆ ಆಗಬೇಕೆಂಬ ಎಚ್ಚರಿಕೆಯ ಮಾತುಗಳನ್ನಾಡಿದರು.
ಸ್ವದೇಶಿ ಆವಿಷ್ಕಾರಗಳ ಮೇಲೆ ಅಭಿಮಾನ ಇರಬೇಕು ಹಾಗೂ ಉಪಯೋಗಿಸಬೇಕು ಎಂದರು. ನಮ್ಮ ಆಲೋಚನಾ ಮಟ್ಟ ಎಷ್ಟಿರಬೇಕೆಂದರೆ ನಾವು ದಿನಂಪ್ರತಿ ಹೊಸ ಹೊಸ ಕ್ರಿಯಾತ್ಮಕ ಚಿಂತನೆಗಳನ್ನು ಮಾಡಬೇಕು. ಹೊಸ ಹೊಸ ಆವಿಷ್ಕಾರಗಳು ನಮ್ಮಿಂದಾಗಬೇಕು ಎಂದರು.
ಆನ್ಲೈನ್ ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರಿಗೂ ಮಾನವಿಕ ಸಂಘದ ಮುಖ್ಯಸ್ಥರಾದ ಪ್ರೊ. ದಾಮೋದರ ಕಣಜಾಲು ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತ ಕೋರಿದರು.
ಕಾಲೇಜಿನ ರಾ. ಸೇ. ಯೋಜನೆ ಘಟಕ-೧ರ ನಾಯಕಿಯಾದ ರಂಜಿತಾ. ಜಿ ಕಾರ್ಯಕ್ರಮ ನಿರ್ವಹಿಸಿದರು. ರಾ. ಸೇ. ಯೋಜನೆಯ ಸ್ವಯಂಸೇವಕರಾದ ಶರಣ್ಯ ಧನ್ಯವಾದ ಸಮರ್ಪಿಸಿದರು.