ಮಂಗಳೂರು : ಹಿಂದೂ ಸಂರಕ್ಷಣಾ ಸಮಿತಿ ವತಿಯಿಂದ 25 ವರ್ಷದ ಕಾರ್ಗಿಲ್ ವಿಜಯ್ ದಿವಸವನ್ನು ಕದ್ರಿ ಯುದ್ಧ ಸ್ಮಾರಕದಲ್ಲಿ ದೇಶಕ್ಕಾಗಿ ಪ್ರಾಣತೆತ್ತ ಸೈನಿಕರಿಗೆ ಪುಷ್ಪಾರ್ಚಣೆ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು.
ಹಿಂದೂ ಜಾಗರಣ ವೇದಿಕೆ ಮಂಗಳೂರು ಮಹಾನಗರ ಸಹ ಸಂಯೋಜಕ ಗಣೇಶ್ ಕೆದಿಲ ಮಾತನಾಡಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರು ನಮಗೆ ಆದರ್ಶವಾಗಬೇಕು ನಮಗೆ ದೇಶದ ಗಡಿಗೆ ಹೋಗಿ ಹೋರಾಟ ಮಾಡಲು ಸಾಧ್ಯವಿಲ್ಲ ಆದರೆ ಕಾರ್ಗಿಲ್ ವಿಜಯೋತ್ಸವ ದಿನದಂದು ಪ್ರತಿಯೊಬ್ಬರು ಯೋಧರಿಗೆ ಗೌರವ ಸಲ್ಲಿಸುವುದನ್ನು ಮರೆಯಬಾರದು ಎಂದರು.
ಹಿಂದೂ ಸಂರಕ್ಷಣಾ ಸಮಿತಿಯ ಪ್ರಮುಖರಾದ ಕಾರ್ತಿಕ್ ಶೆಟ್ಟಿ ಮಾತನಾಡಿ, ಕಾರ್ಗಿಲ್ ಹೋರಾಟದಲ್ಲಿ ಹುತಾತ್ಮ ವೀರ ಯೋಧರಿಗೆ ಗೌರವ ಸಲ್ಲಿಸುವುದು ಹಾಗೂ ವರ್ಷಕ್ಕೆ ಒಂದು ಬಾರಿಯಾದರೂ ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. ದೀಕ್ಷಿತ್ ಕಡೇಶಿವಾಲಯ ಸ್ವಾಗತಿಸಿದರು.