ಪುತ್ತೂರು : ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ‘ಜಿ.ಎಲ್. ಆಚಾರ್ಯ’ ಜ್ಯುವೆಲ್ಲರ್ಸ್ ‘ಆಟಿ ಸೇಲ್’ ಪ್ರಯುಕ್ತ ಗ್ರಾಹಕರಿಗೆ ಜುಲೈ 29 ರಿಂದ ವಜ್ರಾಭರಣಗಳು, ಚಿನ್ನದ ಆಭರಣಗಳು ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ.
ಈ ಆಫರ್ ನಲ್ಲಿ ಗ್ರಾಹಕರು ಖರೀದಿಸುವ ಚಿನ್ನಾಭರಣಗಳ ಮೇಲೆ ಪ್ರತೀ ಗ್ರಾಂ.ಗೆ ರೂ.200ರವರೆಗೆ ಕಡಿತ ಹಾಗೂ ಪ್ರತೀ 1 ಕ್ಯಾರೆಟ್ ವಜ್ರಾಭರಣಗಳ ಖರೀದಿಯಲ್ಲಿ ರೂ. 5000/-ವರೆಗಿನ ಕಡಿತ ಮತ್ತು ಬೆಳ್ಳಿಯ ಆಭರಣಗಳ ಖರೀದಿಗೆ ಪ್ರತೀ ಕೆ.ಜಿ.ಗೆ ರೂ.2,000 ರಿಯಾಯಿತಿ ದೊರೆಯಲಿದೆ.
ಯೆಲ್ಲೋ ಟ್ಯಾಗ್ ಹೊಂದಿರುವ ಅತ್ಯಾಕರ್ಷಕ ವಿಎ ಶುಲ್ಕದೊಂದಿಗೆ ವಿಶೇಷ ಆಭರಣಗಳ ಸಂಗ್ರಹವಿದ್ದು, ಈ ವಿಎ ಶುಲ್ಕ 6%ನಿಂದ ಪ್ರಾರಂಭವಾಗುತ್ತದೆ ಮತ್ತು ಈ ಆಫರ್ ಚಿನ್ನದ ಗಟ್ಟಿ ನಾಣ್ಯಗಳಿಗೆ ಹಾಗೂ ಯಾವುದೇ ಯೋಜನೆ ಅಥವಾ ಮಾಸಿಕ ಕಂತಿನ ಯೋಜನೆಯೊಂದಿಗೆ ಸೇರಿಸಲಾಗುವುದಿಲ್ಲ.
ಸಂಸ್ಥೆಯ ವಿಶೇಷತೆಗಳು
100% ಬಿಎಎಸ್ ಹಾಲ್ ಮಾರ್ಕ್ ಹೊಂದಿರುವ ಶುದ್ಧ ಚಿನ್ನ, ನ್ಯಾಯೋಚಿತ ತಯಾರಿಕಾ ವೆಚ್ಚ, ಸಂಪೂರ್ಣ ಪಾರದರ್ಶಕತೆಯ ಬಿಲ್ಲಿಂಗ್, ಸಿಬ್ಬಂದಿಗಳ ನಗುಮೊಗದ ಸೇವೆ, ಖರೀದಿಯ ಬಳಿಕವೂ ವಸ್ತುಗಳ ಮೇಲೆ ಉತ್ತಮ ಸೇವೆ ಹಾಗೂ ಚಿನ್ನದ ಪರಿಶುದ್ಧತೆಯನ್ನು ಪರೀಕ್ಷಿಸಲು ಸ್ಪೆಕ್ಟ್ರಾಮೀಟರ್ ಸಹ ಲಭ್ಯವಿದೆ. ಬಜೆಟ್ ನಲ್ಲಿ ಚಿನ್ನದ ದರಲ್ಲಾದ ಇಳಿಕೆಯ ಲಾಭ ಪಡೆಯಲು ಗ್ರಾಹಕರಿಗೆ ಸುವರ್ಣಾವಕಾಶವಾಗಿದೆ.