ಪುತ್ತೂರು : ಭಾರೀ ಮಳೆಗೆ ಕಾಣಿಯೂರು ಕಲ್ಪಡ ರಸ್ತೆ ಸಂಪೂರ್ಣ ನೀರಿನಿಂದ ಮುಳುಗಡೆಗೊಂಡಿದ್ದು, ಸಾರ್ವಜನಿಕರು, ಮಕ್ಕಳು ಆ ಕಡೆ ತೆರಳದ ಸ್ಥಿತಿ ನಿರ್ಮಾಣವಾಗಿದೆ.
ಈ ವೇಳೆ ಯುವಕರ ತಂಡವೊಂದು ಹಗ್ಗದ ಸಹಾಯದಿಂದ ಸಾರ್ವಜನಿಕರನ್ನು ದಾಟಿಸಿದರು.
ಹರೀಶ್ ಕಾನಾವು, ರಾಜೇಶ್ ಕೋರಿಕ್ಕಾರ್, ಮೋಹನ್ ಕಂದೂರು, ಕಿರಣ್ ಕಾಣಿಯೂರು, ವಿದ್ಯಾ ಕಾಣಿಯೂರು, ಪ್ರಜಿತ್ ರೈ ಪಾತಾಜೆ, ರಾಮಣ್ಣ ಮಠತ್ತಾರ್, ಪುರುಷೋತ್ತಮ್ ನಾವೂರು ರವರ ತಂಡ ಭಾರೀ ಪ್ರಮಾಣದಲ್ಲಿ ಹರಿಯುತ್ತಿರುವ ನೀರಿನ ಮಧ್ಯೆ ಹಗ್ಗದ ಸಹಾಯದಿಂದ ಸಾರ್ವಜನಿಕರನ್ನು ದಾಟಿಸಿದರು.