Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮೃತ್ಯು..!!

    ಪುತ್ತೂರು: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮೃತ್ಯು..!!

    ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಟಿಪ್ಪರ್: ಇಬ್ಬರು ಗಂಭೀರ..!!

    ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಟಿಪ್ಪರ್: ಇಬ್ಬರು ಗಂಭೀರ..!!

    ಕಾರು–ಆಟೋ ಡಿಕ್ಕಿ: ಇಬ್ಬರಿಗೆ ಗಾಯ..!!

    ಕಾರು–ಆಟೋ ಡಿಕ್ಕಿ: ಇಬ್ಬರಿಗೆ ಗಾಯ..!!

    16 ವರ್ಷದ ಒಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್.. ಮಸೂದೆ ಅಂಗೀಕರಿಸಿದ ಪಾರ್ಲಿಮೆಂಟ್

    ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು, ಪ್ರಚೋದನಾತ್ಮಕ ಪೋಸ್ಟ್: ಬಂಟ್ವಾಳದಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲು..!!

    ಮಂಗಳೂರು: ನೇಪಾಳ ಮೂಲದ ಕುಖ್ಯಾತ ಮನೆಗಳ್ಳರ ತಂಡ ಬಂಧನ; ₹10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣ ವಶ..!!

    ಮಂಗಳೂರು: ನೇಪಾಳ ಮೂಲದ ಕುಖ್ಯಾತ ಮನೆಗಳ್ಳರ ತಂಡ ಬಂಧನ; ₹10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣ ವಶ..!!

    ಬಂಟ್ವಾಳ: ಯುವತಿಯ ಹತ್ಯೆ : ಮನುಕುಲವೇ ತಲೆತಗ್ಗಿಸುವಂತಹ ಕೃತ್ಯ – ಆರೋಗ್ಯ ಸಚಿವ ಯು.ಟಿ ಖಾದರ್..!!

    ಬಂಟ್ವಾಳ: ಯುವತಿಯ ಹತ್ಯೆ : ಮನುಕುಲವೇ ತಲೆತಗ್ಗಿಸುವಂತಹ ಕೃತ್ಯ – ಆರೋಗ್ಯ ಸಚಿವ ಯು.ಟಿ ಖಾದರ್..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಮುಕ್ಕೂರು : ಎಎಸ್ ಐ ದಿ.ಸುಂದರ ಕಾನಾವುಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ : ಬದುಕು ಅರಳುತ್ತಿದ್ದ ಹೊತ್ತಲ್ಲಿ ಸುಂದರ ಅವರ ನಿರ್ಗಮಿಸಿದ್ದು ದುಃಖಕರ ಸಂಗತಿ – ಡಾ. ನರಸಿಂಹ ಶರ್ಮಾ ಕಾನಾವು

August 3, 2024
in ಪುತ್ತೂರು, ಸುಳ್ಯ
0
ಮುಕ್ಕೂರು : ಎಎಸ್ ಐ ದಿ.ಸುಂದರ ಕಾನಾವುಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ : ಬದುಕು ಅರಳುತ್ತಿದ್ದ ಹೊತ್ತಲ್ಲಿ ಸುಂದರ ಅವರ ನಿರ್ಗಮಿಸಿದ್ದು ದುಃಖಕರ ಸಂಗತಿ – ಡಾ. ನರಸಿಂಹ ಶರ್ಮಾ ಕಾನಾವು
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಮುಕ್ಕೂರು : ಕಡು ಬಡತನದ ನಡುವೆ ಕೂಲಿ ಕೆಲಸ ನಿರ್ವಹಿಸುತ್ತಿದ್ದ ಸುಂದರ ಕಾನಾವು ತನ್ನ ಪರಿಶ್ರಮದಿಂದಲೇ ಪೊಲೀಸ್ ಇಲಾಖೆಗೆ ಸೇರಿ ವೃತ್ತಿ ನಿಷ್ಠೆಯಿಂದ ಎಎಸ್‍ಐ ಹಂತಕ್ಕೆ ತಲುಪಿದ್ದರು. ಅವರು ವೃತ್ತಿ, ವೈಯಕ್ತಿಕ ಬದುಕಿನಲ್ಲಿ ಇನ್ನಷ್ಟು ಉನ್ನತ್ತಿ ಕಾಣುವ ಹೊತ್ತಲ್ಲಿ ಅಕಾಲಿಕವಾಗಿ ನಮ್ಮನ್ನಗಳಿರುವುದು ದುಃಖಕರ ಸಂಗತಿ ಎಂದು ಕಾನಾವು ಕ್ಲಿನಿಕ್ ವೈದ್ಯ, ಪುತ್ತೂರು ಐಎಂಎ ಘಟಕದ ಅಧ್ಯಕ್ಷ ಡಾ.ನರಸಿಂಹ ಶರ್ಮಾ ಕಾನಾವು ಹೇಳಿದರು.

Advertisement
Advertisement
Advertisement

Advertisement

ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮುಕ್ಕೂರು ನ್ಯಾಯಬೆಲೆ ಅಂಗಡಿಯ ಸಭಾಂಗಣದಲ್ಲಿ ನಡೆದ ಪುತ್ತೂರು ನಗರ ಠಾಣಾ ಎಎಸ್‍ಐ ಆಗಿದ್ದ ದಿ.ಸುಂದರ ಕಾನಾವು ಅವರ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು.

ಕಷ್ಟಗಳು ದೂರವಾಗಿ ಬದುಕು ಅರಳುತ್ತಿದ್ದ ಹೊತ್ತಲ್ಲಿ ಸುಂದರ ಅವರು ಅಗಲಿ ಹೋದರು. ಸಣ್ಣ ವಯಸ್ಸಿನಲ್ಲಿ ಅವರ ಹಠಾತ್ ನಿರ್ಗಮನ ಇಡೀ ಕುಟುಂಬಕ್ಕೆ, ಊರಿಗೆ ಆಘಾತವನ್ನು ಉಂಟು ಮಾಡಿದೆ. ಆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡುವ ಜತೆಗೆ ಸುಂದರ ಅವರ ನೆನಪು ಶಾಶ್ವತವಾಗಿರಲಿ ಎಂದರು.

ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಸುಂದರ ಕಾನಾವು ಅವರು ಕೂಲಿ ಕೆಲಸ ಮಾಡುತ್ತಿದ್ದ ಹೊತ್ತಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ದಿ. ಕಾನಾವು ಗೋಪಾಲಕೃಷ್ಣ ಭಟ್ ಅವರು ಇದಕ್ಕೆ ಪ್ರೋತ್ಸಾಹ ನೀಡಿದ್ದರು. ಸತತ ಪ್ರಯತ್ನದ ಫಲವಾಗಿ ಅವರಿಗೆ ಸರಕಾರಿ ಕೆಲಸ ಸಿಕ್ಕಿತ್ತು. ಆದರೆ ಬದುಕಿನ ಸುಖ ಅನುಭವಿಸುವ ಹೊತ್ತಿಗೆ ಅವರ ನಿರ್ಗಮನ ಎಲ್ಲರನ್ನೂ ಶೂನ್ಯವನ್ನಾಗಿಸಿದೆ ಎಂದರು.

ಕಾನಾವು ಕುವೆತ್ತಡ್ಕ ಕುಟುಂಬದ ಪರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅರಸಿಕೆರೆ ತಾಲೂಕಿನ ಮೇಲ್ವಿಚಾರಕ ಸೀತಾರಾಮ ಕಾನಾವು ಮಾತನಾಡಿ, ಇಡೀ ಕುಟುಂಬಕ್ಕೆ ಪ್ರೇರಕ ಶಕ್ತಿಯಾಗಿದ್ದ ಸುಂದರ ಕಾನಾವು ಅಣ್ಣನ ಸ್ಥಾನದಲ್ಲಿ ನಿಂತು ನಮ್ಮನ್ನು ಮುನ್ನಡೆಸುತ್ತಿದ್ದರು. ಅವರ ನಿಧನದಿಂದ ನಾವು ನಮ್ಮ ಆಧಾರಸ್ತಂಭವನ್ನೇ ಕಳೆದುಕೊಂಡಿದ್ದೇವೆ. ಈ ಹೊತ್ತಲ್ಲಿ ಊರವರು ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಸುಂದರ ಕಾನಾವು ಅವರನ್ನು ನೆನಪು ಮಾಡಿಕೊಂಡಿದ್ದು ಜತೆಗೆ ನಮ್ಮ ಕುಟುಂಬಕ್ಕೂ ಆತ್ಮ ಸ್ಥೈರ್ಯ ತುಂಬಿರುವುದಕ್ಕೆ ಕೃತಜತೆ ಸಲ್ಲಿಸುವೆ ಎಂದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ವೃತ್ತಿಯಲ್ಲಿ ಎಎಸ್‍ಐ ಆಗಿದ್ದರೂ ಯಾವುದೇ ಅಹಂ ತೋರದೆ ಸರಳ ಸಜ್ಜನಿಕೆಯಿಂದ ಬದುಕಿದವರು ಸುಂದರ ಕಾನಾವು. ಊರಿನ ಬಹುತೇಕರ ಪಾಲಿಗೆ ಅಪರಿಚಿತನಂತೆ ಇದ್ದರು. ತಾನಾಯಿತೂ, ತನ್ನ ಕೆಲಸವಾಯಿತು ಎನ್ನುವ ಮನಸ್ಥಿತಿಯ ಮೃದು ಹೃದಯಿಯನ್ನು ಕಳೆದುಕೊಂಡಿರುವುದು ಊರಿಗೆ ಬಹು ದೊಡ್ಡ ನಷ್ಟ ಎಂದರು.

ಊರ ಪ್ರಮುಖರಾದ ಪ್ರಗತಿಪರ ಕೃಷಿಕರಾದ ಸುಬ್ರಾಯ ಭಟ್ ನೀರ್ಕಜೆ, ಮೋಹನ ಬೈಪಡಿತ್ತಾಯ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಮುಕ್ಕೂರು-ಪೆರುವಾಜೆ ಜ್ಯೋತಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಸತ್ಯಪ್ರಸಾದ್ ಕಂಡಿಪ್ಪಾಡಿ, ಮುಕ್ಕೂರು ಅಂಗನವಾಡಿ ಮೇಲುಸ್ತುವಾರಿ ಸಮಿತಿಯ ಹೊನ್ನಪ್ಪ ಗೌಡ ಚಾಮುಂಡಿಮೂಲೆ ಮಾತನಾಡಿ, ಸುಂದರ ಕಾನಾವು ಅವರ ಬದುಕಿನ ಕ್ಷಣಗಳನ್ನು ಮೆಲುಕು ಹಾಕಿ ವೃತ್ತಿಯಲ್ಲಿ ಮುಂಭಡ್ತಿ ಹೊಂದಿದ್ದ ಅವರನ್ನು ಸಮ್ಮಾನಿಸಬೇಕಿದ್ದ ಹೊತ್ತಲ್ಲಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಮಾಡುವ ಸ್ಥಿತಿ ಬಂದಿರುವುದು ಅತ್ಯಂತ ದುಃಖಕರ ಸಂಗತಿ. ಅವರ ವ್ಯಕ್ತಿತ್ವ, ಆದರ್ಶಗಳನ್ನು ಸ್ಮರಿಸುವ ಜತೆಗೆ ಅವರನ್ನು ಸದಾ ನೆನಪಿನಲ್ಲಿಡುವ ಪ್ರಯತ್ನ ಮಾಡೋಣ. ಕಾನಾವು ಕುವೆತ್ತಡ್ಕದ ಕುಟುಂಬದ ಜತೆಗೆ ನಾವೆಲ್ಲರೂ ಇದ್ದೇವೆ ಎಂದರು.

ಕಾನಾವು ಕುವೆತ್ತಡ್ಕ‌ ಕುಟುಂಬದ ಹಿರಿಯರಾದ ಕುಂಞ ದೀಪ ಬೆಳಗಿಸಿದರು. ಪ್ರಗತಿಪರ ಕೃಷಿಕ ರಾಮಚಂದ್ರ ಕೋಡಿಬೈಲು, ವೈದ್ಯ ಡಾ.ರಾಮಕಿಶೋರ್ ಕಾನಾವು, ವಿವಿಧ ಸಂಘಟನೆಗಳ ಪರವಾಗಿ ಮುಕ್ಕೂರು ಸ.ಹಿ.ಪ್ರಾ.ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ಎಸ್‍ಡಿಎಂಸಿ ಅಧ್ಯಕ್ಷ ಜಯಂತ ಕುಂಡಡ್ಕ, ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ತಾರಾನಾಥ ಕುಂಡಡ್ಕ, ಕುಂಡಡ್ಕ ನೇಸರ ಯುವಕ ಮಂಡಲದ ಕಾರ್ಯದರ್ಶಿ ರಾಮಚಂದ್ರ ಚೆನ್ನಾವರ, ಮುಕ್ಕೂರು ಶ್ರೀ ಶಾರದೋತ್ಸವ ಸಮಿತಿ ಮಾಜಿ ಅಧ್ಯಕ್ಷ ಕಿರಣ್ ಚಾಮುಂಡಿಮೂಲೆ, ಪೆರುವಾಜೆ-ಮುಕ್ಕೂರು ಮೊಗೇರ ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ರಮೇಶ್ ಕಾನಾವು, ಅಂಗನವಾಡಿ ಕಾರ್ಯಕರ್ತೆ ರೂಪಾ ಸೇರಿದಂತೆ ಹಲವಾರು ಊರವರು, ಕಾನಾವು ಕುವೆತ್ತಡ್ಕದ ಕುಟುಂಬಸ್ಥರು ಉಪಸ್ಥಿತರಿದ್ದರು.

Previous Post

ಲಯನ್ಸ್ ಪ್ರಾಯೋಜಿತ ಎಂ.ಫ್ರೆಂಡ್ಸ್ ಮೀಲ್ಸ್ ಆನ್ ವ್ಹೀಲ್ಸ್- ಕಾರುಣ್ಯ ಕಿಚನ್ ಉದ್ಘಾಟನೆ : ಎಂ.ಫ್ರೆಂಡ್ಸ್‌ನಿಂದ ಕರುಣೆಯ ಕೆಲಸ – ಅರುಣಾ ಅಭಯ್ ಓಸ್ವಾಲ್

Next Post

ರಾಮನ ಅಸ್ತಿತ್ವಕ್ಕೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ : ವಿವಾದ ಹುಟ್ಟು ಹಾಕಿದ ಡಿಎಂಕೆ ಸಚಿವನ ಹೇಳಿಕೆ!

OtherNews

ಪುತ್ತೂರು: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮೃತ್ಯು..!!
Featured

ಪುತ್ತೂರು: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮೃತ್ಯು..!!

July 17, 2026
ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಟಿಪ್ಪರ್: ಇಬ್ಬರು ಗಂಭೀರ..!!
Featured

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಟಿಪ್ಪರ್: ಇಬ್ಬರು ಗಂಭೀರ..!!

July 17, 2026
ಕಾರು–ಆಟೋ ಡಿಕ್ಕಿ: ಇಬ್ಬರಿಗೆ ಗಾಯ..!!
ಸುಳ್ಯ

ಕಾರು–ಆಟೋ ಡಿಕ್ಕಿ: ಇಬ್ಬರಿಗೆ ಗಾಯ..!!

July 17, 2026
ಪುತ್ತೂರು ಶಾಸಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಆರೋಪ: ಪೊಲೀಸರಿಗೆ ದೂರು..!!
ಕ್ರೈಮ್

ಪುತ್ತೂರು ಶಾಸಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಆರೋಪ: ಪೊಲೀಸರಿಗೆ ದೂರು..!!

July 17, 2026
ಬಿಸಿ ರೋಡ್‌ನಲ್ಲಿ ಯುವತಿಯ ಹತ್ಯೆ: ವಿಶ್ವ ಹಿಂದೂ ಪರಿಷದ್–ಬಜರಂಗದಳ ಪುತ್ತೂರು ಜಿಲ್ಲಾ ಘಟಕದಿಂದ ಖಂಡನೆ..!!
ಪುತ್ತೂರು

ಬಿಸಿ ರೋಡ್‌ನಲ್ಲಿ ಯುವತಿಯ ಹತ್ಯೆ: ವಿಶ್ವ ಹಿಂದೂ ಪರಿಷದ್–ಬಜರಂಗದಳ ಪುತ್ತೂರು ಜಿಲ್ಲಾ ಘಟಕದಿಂದ ಖಂಡನೆ..!!

July 16, 2026
ಬೆಳ್ತಂಗಡಿ: ಅಪ್ರಾಪ್ತ ಶಾಲಾ ಬಾಲಕಿಯ ಮೇಲೆ ಜೆಸಿಬಿ ಚಾಲಕ ಮತ್ತು ಸಂಬಂಧಿಯಿಂದ ಅತ್ಯಾಚಾರ..!! ಗರ್ಭವತಿಯಾದ ಅಪ್ರಾಪ್ತೆ, ಆರೋಪಿಗಳು ನಾಪತ್ತೆ
Featured

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಯುವಕ ವಶಕ್ಕೆ..!!

July 16, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮೃತ್ಯು..!!

ಪುತ್ತೂರು: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮೃತ್ಯು..!!

July 17, 2026
ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಟಿಪ್ಪರ್: ಇಬ್ಬರು ಗಂಭೀರ..!!

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಟಿಪ್ಪರ್: ಇಬ್ಬರು ಗಂಭೀರ..!!

July 17, 2026
ಮಳೆ ಹಿನ್ನಲೆ-ನಾಳೆ (ಜು.18) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ..!!

ಮಳೆ ಹಿನ್ನಲೆ-ನಾಳೆ (ಜು.18) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ..!!

July 17, 2026
ಕಾರು–ಆಟೋ ಡಿಕ್ಕಿ: ಇಬ್ಬರಿಗೆ ಗಾಯ..!!

ಕಾರು–ಆಟೋ ಡಿಕ್ಕಿ: ಇಬ್ಬರಿಗೆ ಗಾಯ..!!

July 17, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.