ಟೀಮ್ ಸತ್ಯಜಿತ್ ಸುರತ್ಕಲ್ ತಂಡದ ಸಭೆಯನ್ನು ಆಗಸ್ಟ್ 19ರಂದು ಆಯೋಜಿಸಲಾಗಿದೆ.
ಆಗಸ್ಟ್ 19, 2026ರ ಬುಧವಾರ ಸಂಜೆ 5 ಗಂಟೆಗೆ ತುಂಬೆಯ ಶಾರದಾ ಸಭಾಭವನದಲ್ಲಿ ಸಭೆ ನಡೆಯಲಿದ್ದು, ಸತ್ಯಜಿತ್ ಸುರತ್ಕಲ್ ಅವರ ಉಪಸ್ಥಿತಿಯಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸತ್ಯಜಿತ್ ಸುರತ್ಕಲ್ ಅವರ ಅಭಿಮಾನಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಆಗಮಿಸಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.




























