ಬೆಳ್ತಂಗಡಿ: ಬೆಂಗಳೂರು ಏರ್ ಪೋರ್ಟ್ ರಸ್ತೆಯಲ್ಲಿ ನ.8ರ ಬೆಳಗ್ಗಿನ ಜಾವ ನಡೆದ ಬೈಕ್ ಮತ್ತು ಲಾರಿ ಅಪಘಾತದಲ್ಲಿ ಇಂದಬೆಟ್ಟುವಿನ ಸನಾತನಿ ಮನೆಯ ವಸಂತ ಗೌಡರ ಪುತ್ರ ಯುವಕ ತುಷಾರ್ ಗೌಡ(22ವ) ಸಾವನ್ನಪ್ಪಿದ್ದಾರೆ.
ಇವರು ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಎಂ ಬಿ ಎ ವಿದ್ಯಾರ್ಥಿಯಾಗಿದ್ದರು. ತುಷಾರ್ ತಂದೆ ವಸಂತ ಗೌಡ, ತಾಯಿ ಅನುಗ್ರಹ ಶಾಲಾ ಶಿಕ್ಷಕಿ ವಿನಯಲತಾ, ತಂಗಿ ತುಷಿತಾರನ್ನು ಅಗಲಿದ್ದಾರೆ.
ಪ್ರಕರಣ ಸಂಬಂಧಿಸಿ ಬೆಂಗಳೂರಿನ ಯಲಹಂಕ ನ್ಯೂ ಟೌನ್ ಟ್ರಾಫಿಕ್ ಸ್ಟೇಷನ್ ನಲ್ಲಿ ದೂರು ದಾಖಲಾಗಿರುವುದಾಗಿ ತಿಳಿದುಬಂದಿದೆ. ಸಹ ಸವಾರ ಬೆಳಾಲಿನ ಸರುಳಿ ನಿವಾಸಿ ದಾಮೋದರ ಗೌಡ ಪುತ್ರ ಸೃಜನ್ ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.