ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ಪೆರ್ನೆ ಬಿಳಿಯೂರು ಪಂಚಾಯತ್ ನ ಬಿಳಿಯೂರಿನ ಒಂದನೇ ವಾರ್ಡಿನ ಉಪಚುನಾವಣೆಗೆ ಅಭ್ಯರ್ಥಿಯಾಗಿ ಪ್ರತಿಮಾ ರಾಜೀವ ರವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಂಡಲ ಉಪಾಧ್ಯಕ್ಷರುಗಳಾದ ಹರಿಪ್ರಸಾದ್ ಯಾದವ್, ವಿದ್ಯಾಧರ್ ಜೈನ್, ಮಂಡಲ ಕಾರ್ಯದರ್ಶಿ ಪುನೀತ್ ಮಾಡತ್ತಾರು, ಮಹಾಶಕ್ತೀ ಕೇಂದ್ರ ಅಧ್ಯಕ್ಷರಾದ ರಾಜೇಶ್ ಬಾಳೆಕಲ್ಲು, ಕಾರ್ಯದರ್ಶಿ ಕಿರಣ್ ಶೆಟ್ಟಿ , ಶಕ್ತೀ ಕೇಂದ್ರ ಸಂಚಾಲಕರಾದ ರಮೇಶ್ ತೋಟ, ಪಂಚಾಯತ್ ಸದಸ್ಯರಾದ ನವೀನ್ ಪದೆಬರಿ, ಕೇಶವ ಸುಣ್ಣಾನ, ಪ್ರಕಾಶ್ ನಾಯಕ್,ಬೂತ್ ಅಧ್ಯಕ್ಷ ಜಯಕೀರ್ತಿ, ಮಹೇಶ್ ಪಡಿವಾಳ್ ಪಾರ್ಟಿಯ ಬೂತ್ ಪ್ರಮುಖರು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
ಈ ಹಿಂದಿನ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ವಿದೇಶಕ್ಕೆ ಹೋದ ಕಾರಣ ಈ ಉಪಚುನಾವಣೆ ಬಂದಿರುತ್ತದೆ.