“ಏಕ್ ಭಾರತ್ ಶ್ರೇಷ್ಠ ಭಾರತ್ ” ನ ಅಡಿಯಲ್ಲಿ ಸತ್ಯರಾಜ್ ಫೈರ್ & ಸೇಫ್ಟಿ ಆಫೀಸರ್ ಮಂಗಳೂರು ಇವರಿಂದ ಫೈರ್ & ಸೇಫ್ಟಿ ಬಗೆಗೆ ವಿಟ್ಲ ಬಸವನಗುಡಿಯಲ್ಲಿರುವ ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.
ವಿದ್ಯಾರ್ಥಿಗಳು, ಸಮಾಜದಲ್ಲಿ, ಶಾಲೆಯಲ್ಲಿ, ಮಾಲ್ ಗಳಲ್ಲಿ, ತಮ್ಮ ನಿತ್ಯ ಜೀವನದಲ್ಲಿ ಬೆಂಕಿಯಿಂದ ಆಗುವ ಅನಾಹುತದಿಂದ ಸುರಕ್ಷತ ಕ್ರಮ ಮಾಡಿಕೊಳ್ಳಬಹುದಾದ ಮಾಹಿತಿಯನ್ನು ನೀಡಲಾಯಿತು. ಬದುಕು ಅಮೂಲ್ಯ… ನೆಮ್ಮದಿಯ ಬದುಕಿನ ಸುರಕ್ಷತೆ ಅಗತ್ಯ. ಅದಕ್ಕಾಗಿ ಕೆಲವೊಂದು ಉಪಕರಣಗಳ ಪರಿಚಯ ಹಾಗೂ ಡೆಮೋಸ್ಟ್ರೇಷನ್ ಮಾಡಿ ತೋರಿಸಲಾಯಿತು. ವಿದ್ಯಾರ್ಥಿಗಳು ಸುರಕ್ಷತೆಯ ಬಗ್ಗೆ ವಿವಿಧ ಪ್ರಶ್ನೆಗಳನ್ನು ಕೇಳುತ್ತಾ ಉತ್ತರ ತಿಳಿದುಕೊಂಡರು.
ಆರೋಗ್ಯ ಮತ್ತು ಅಗ್ನಿ ಸುರಕ್ಷತೆಯ ಕಾರ್ಯಗಳನ್ನು ಮಾಕ್ ಟ್ರೈನಿಂಗ್ ಮಾಡಿ ವಿವರಿಸಲಾಯಿತು. ಶಾಲೆಯ ಹೆಲ್ತ್ ಕ್ಲಬ್ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಶಾಲಾ ಆಧ್ಯಕ್ಷ ಶ್ರೀಧರ ಶೆಟ್ಟಿ. ಡಿ, ಶಾಲಾ ಆಡಳಿತಾಧಿಕಾರಿ ರಾಧಾಕೃಷ್ಣ ಎ , ಪ್ರಾಂಶುಪಾಲ ಜಯರಾಮ ರೈ ಮತ್ತು ಉಪಾಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು.ಹೆಲ್ತ್ ಕ್ಲಬ್ ನ ನೋಡೆಲ್ ಮತ್ತು ಶಿಕ್ಷಕಿ ಧನಲಕ್ಷ್ಮೀ ಸ್ವಾಗತಿಸಿ ಸಂಯೋಜಿಸಿದರು , ಹೆಲ್ತ್ ಕ್ಲಬ್ ಸದಸ್ಯರು ಮತ್ತು ಶಿಕ್ಷಕಿಯರಾದ ಹೇಮಲತ, ನಂದಿನಿ ಮತ್ತು ರಶ್ಮಿ.ಕೆ ಸಹಕರಿಸಿದರು.