ಪುತ್ತೂರು: ಭಾರತೀಯ ಕಿಸಾನ್ ಸಂಘ ಪುತ್ತೂರು ಘಟಕದ ಸಭೆಯು ರಾಜ್ಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಹಾಡ್ಯ ರಮೇಶ್ ರಾಜು ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ಪುತ್ತೂರು ತಾಲೂಕು ಸಮಿತಿಯ ಪೂರ್ಣ ಪ್ರಮಾಣದ ಪದಾಽಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕಿಸಾನ್ ಸಂಘದ ಪುತ್ತೂರು ತಾಲೂಕು ಅಧ್ಯಕ್ಷರಾಗಿ ಜನಾರ್ಧನ ರೈ ಪಡ್ಡಂಬೈಲ್, ಕಾರ್ಯದರ್ಶಿಯಾಗಿ ಮಹಾಬಲ ರೈ ಕುಕ್ಕುಂಜೋದು ಅವರನ್ನು ಹಾಗೂ ಉಳಿದಂತೆ 21 ಸದಸ್ಯರ ಪೂರ್ಣ ಪ್ರಮಾಣದ ಸಮಿತಿಯನ್ನು ರಚಿಸಲಾಯಿತು.
ಸಭೆಯಲ್ಲಿ ಕೃಷಿಕರ ಮೂಲ ಸಮಸ್ಯೆಗಳ ಬಗ್ಗೆ ಗಮನ ಸೆಳೆದು ಪ್ರಮುಖವಾಗಿ ಕುಮ್ಮಿ ಹಕ್ಕಿನ, ಅಡಿಕೆಗೆ ಎಳೆಚುಕ್ಕಿ ಬಾಧೆ, ಕಾಡುಪ್ರಾಣಿಗಳ ಉಪಟಳ, ಇನ್ನಿತರ ಸಮಸ್ಯೆಗಳ ಬಗ್ಗೆಯೂ ಮುಂದೆ ಏನೇನು ಕ್ರಮಗಳು ಆಗಬೇಕೆಂದು ಚರ್ಚೆ ನಡೆಯಿತು. ಸಭೆಯಲ್ಲಿ ತಾಲೂಕಿನಿಂದ ಜಿಲ್ಲಾ ಸಮಿತಿಗೆ ಪೂರ್ಣಚಂದ್ರ, ರಾಮಪ್ರಸಾದ್ ಅವರನ್ನು ಆಯ್ಕೆ ಮಾಡಲಾಯಿತು. ಕಿಸಾನ್ ಸಂಘದ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ, ಪ್ರಾಂತ್ಯ ಪ್ರಮುಖ ಸುಬ್ರಾಯ ಉಪಸ್ಥಿತರಿದ್ದರು.