ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ನಿರ್ಣಯದಂತೆ ವಿಟ್ಲ ಪೇಟೆಗೆ ಆಗಮಿಸುವ ಜನರನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದ್ದು, ಇಂದು ಒಟ್ಟು 80 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ.
ವಿಟ್ಲ ಪಟ್ಟಣ ಪಂಚಾಯತ್ ಕೊರೊನಾ ಟಾಸ್ಕ್ ಪೋರ್ಸ್ ಸಭೆಯಲ್ಲಿ ಕೊರೊನಾ ನಿಯಂತ್ರಿಸಲು ವಾರಾಂತ್ಯ ಕರ್ಫ್ಯೂ ವಿಧಿಸಲಾಗಿದ್ದು, ಪ್ರತಿದಿನ ಪೇಟೆಗೆ ಬರುವ ಜನರನ್ನು ವಿಟ್ಲ ಪೇಟೆಯ ಪ್ರವೇಶ ಸ್ಥಳವಾದ ನಾಡಕಚೇರಿ, ಮೇಗಿನಪೇಟೆ, ಬೊಬ್ಬೆಕೇರಿ, ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು, ಪಟ್ಟಣ ಪಂಚಾಯತ್ ಸಿಬ್ಬಂದಿಗಳು, ವಿಟ್ಲ ಪೊಲೀಸರು ಜಂಟಿಯಾಗಿ ನಾಕಾಬಂಧಿ ಅಳವಡಿಸಿದ್ದರು.
ವಿಟ್ಲ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ 80 ಮಂದಿಯ ಸ್ಲ್ಯಾಬ್ ಪರೀಕ್ಷೆ ನಡೆಸಲಾಗಿದೆ. ವರದಿ ಇನ್ನೇನು ಬರಬೇಕಿದೆ. ಆದರೆ ಉಳಿದ ಸ್ಥಳವಾದ ನಾಡಕಚೇರಿ, ಮೇಗಿನಪೇಟೆ, ಬೊಬ್ಬೆಕೇರಿ ಗಳಲ್ಲಿ ದೇಹದ ಟೆಂಪರೇಚರ್ ಪರೀಕ್ಷಿಸಲಾಗಿದೆ. ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಲಾಯಿತು. ಪೇಟೆಯ ನಾಲ್ಕು ಕಡೆಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಪಂಚಾಯತ್ ತಿಳಿಸಿದ್ದು, ಆದರೆ ಒಂದು ಕಡೆ ಮಾತ್ರ ಕೊರೊನಾ ತಪಾಸಣೆ ನಡೆಸಲಾಗಿದೆ. ಈ ಹೊಸ ನಿಯಮ ಪ್ರಥಮ ದಿನ ಇಂದು ನಿರೀಕ್ಷೆಯಷ್ಟು ಯಶಸ್ಸು ಕಾಣಲಿಲ್ಲ.