ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಹಾಗೂ ಸಾರ್ವಜನಿಕ ದುರ್ಗಾ ಪೂಜಾ ಸಮಿತಿಯ ವತಿಯಿಂದ ನಡೆಯುವ ಅರ್ಧ ಏಕಾಹ ಭಜನಾ ಕಾರ್ಯಕ್ರಮಕ್ಕೆ ಹಾಗೂ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಜಗನ್ನಾಥ ಸಾಲ್ಯಾನ್, ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಜಯರಾಮ ಬಲ್ಲಾಳ್, ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ರವಿಪ್ರಕಾಶ್, ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ, ಮಂಡಲ ಕಾರ್ಯದರ್ಶಿ ಶ್ರೀಕೃಷ್ಣ ವಿಟ್ಲ, ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ಮರುವಾಳ, ಯುವಮೋರ್ಚಾ ಕಾರ್ಯದರ್ಶಿ ನಿತಿನ್ ಬೊಡ್ಡೋಣಿ, ಶಕ್ತಿ ಕೇಂದ್ರ ಪ್ರಮುಖರಾದ ಲಕ್ಷ್ಮಣ ಮಾಡ,ಶಿಶಿರ್ ಗೌಡ, ರಾಜೇಶ್ ಕರವೀರ, ಪುತ್ತಿಲ ಪರಿವಾರ ಪ್ರಮುಖರಾದ ಮೋಹನ್ ಸೇರಾಜೆ, ರವಿಶಂಕರ್ ವಿಟ್ಲ, ರಾಜೇಶ್ ಬೊಬ್ಬೆಕೇರಿ, ಸತ್ಯನಾರಾಯಣ ಕೇಪು, ಸುಧೀರ್ ನಾಯ್ಕ್, ಶರತ್ ಎನ್ಎಸ್, ಹರೀಶ್ ಕಟ್ಟೆ, ಜಯಂತ್ ಸೂರ್ಯ , ವಿನೋದ್ ಕೂಡೂರು ಉಪಸ್ಥಿತರಿದ್ದರು.