ಬಂಟ್ವಾಳ : ತೀವ್ರ ಅನಾರೋಗ್ಯದಿಂದಾಗಿ ಬ್ರಹ್ಮರಕೂಟ್ಲು ಟೋಲ್ ಬಳಿಯ ರಸ್ತೆ ಬದಿ ಮಲಗಿದ್ದ ಕುಂದಾಪುರ ಮೂಲದ ಕೂಲಿ ಕಾರ್ಮಿಕರೋರ್ವರನ್ನು ಸೇವಾಭಾರತಿ ಕಾರ್ಯಕರ್ತರು ಸೇವಾಭಾರತಿ ಆಂಬ್ಯುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ದಾಖಲಿಸಿದರು.
ಸೇವೆಯೇ ಮೂಲಮಂತ್ರ ಎಂಬ ಧ್ಯೇಯ ವಾಕ್ಯದೊಡನೆ ರಾಜ್ಯಾದಾದ್ಯಂತ ಸೇವಾ ಕಾರ್ಯಗಳನ್ನು ಮಾಡುತ್ತಿರುವ ಸೇವಾಭಾರತಿ ಕಾರ್ಯಕರ್ತರು ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಹಗಲಿರುಳೆನ್ನದೆ ಕಾರ್ಯವನ್ನು ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ.