ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳದ ನೂತನ ಕರೆ ನಿರ್ಮಾಣ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ಸಿಗಲಿದ್ದು, ಸ್ಥಳೀಯ ಶಾಸಕ ಅಶೋಕ್ ರೈ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕಂಬಳದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಗತ್ಯ ಸೌಕರ್ಯಗಳು, ಕಾಮಗಾರಿಗಳ ರೂಪುರೇಷೆ ಹಾಗೂ ಮುಂದಿನ ಯೋಜನೆಗಳ ಕುರಿತು ಚರ್ಚೆ ನಡೆಯಿತು. ಕಂಬಳ ಕ್ರೀಡೆಯನ್ನು ಇನ್ನಷ್ಟು ಉತ್ತೇಜಿಸುವ ಉದ್ದೇಶದಿಂದ ನೂತನ ಕರೆ ನಿರ್ಮಾಣ ಮಹತ್ವದ ಹೆಜ್ಜೆಯಾಗಲಿದೆ ಎಂದು ತಿಳಿಸಲಾಯಿತು.
ಸ್ಥಳ ವೀಕ್ಷಣೆಯ ವೇಳೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ , ಪಂಜಿಗುಡ್ಡೆ ಈಶ್ವರ್ ಭಟ್ ಸೇರಿದಂತೆ ಮುರಳೀಧರ್ ರೈ ಮಠಂತಬೆಟ್ಟು, ನಿರಂಜನ್ ರೈ ಮಠಂತಬೆಟ್ಟು , ರೋಶನ್ ರೈ ಬನ್ನೂರು, ವಿಕ್ರಂ ಶೆಟ್ಟಿ, ಕೇಶವ ಭಂಡಾರಿ ಕೈಪ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಲೋಕೇಶ್ ಪಡ್ಡಾಯೂರು, ಗಿರೀಶ್ ರೈ ಸಂಟ್ಯಾರ್, ಸನತ್ ರೈ ವಳತ್ತಡ್ಕ, ಶಿವಪ್ರಸಾದ್ ರೈ ಕೋಡಿಂಬಾಡಿ, ಸುಶಾಂತ್ ಶೆಟ್ಟಿ, ಪ್ರಸನ್ನ ಭಟ್ ಕೆದಿಲ, ಪೂರ್ಣೇಶ್ ಭಂಡಾರಿ, ಹರೀಶ್ ಬಂಗೇರ, ನವೀನ್ ರೈ ಬನ್ನೂರು, ಸುಮಿತ್ ಶೆಟ್ಟಿ, ದಾಮೋದರ್ ಮುರ, ರೋಹನ್ ಪೂಜಾರಿ ಮತ್ತಿತರರು ಹಾಜರಿದ್ದರು.


























