ಪುತ್ತೂರು: ರೌಡಿ ಶೀಟರ್ ಓರ್ವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಾಂತಿಭಂಗ ಪ್ರಕರಣ ದಾಖಲಾಗಿದೆ.
ಗದಗ ಜಿಲ್ಲೆಯ ಬೆಟ್ಟಗಿರಿ ನಿವಾಸಿ ಜಯಪ್ರಕಾಶ್ (45ವ.) ಎಂಬವರ ವಿರುದ್ಧ ಶಾಂತಿ ಭಂಗ ಪ್ರಕರಣ ದಾಖಲಾಗಿದೆ. ಅವರು ರೌಡಿ ಶೀಟರ್ ಆಗಿದ್ದು, ಕಾನೂನಿಗೆ ತಲೆಬಾಗದವರಾಗಿದ್ದು, ಯಾರ ಮಾತನ್ನೂ ಕೇಳದವರು. ಮುಂಬರುವ ದಿನಗಳಲ್ಲಿ ಸಾರ್ವಜನಿಕರ ಜೀವಕ್ಕಾಗಲಿ, ಆಸ್ತಿಗಾಗಲಿ ಹಾನಿಯನ್ನುಂಟುಮಾಡುವುದಲ್ಲದೆ ಸಾರ್ವಜನಿಕ ಶಾಂತಿ ಭಂಗವನ್ನು ಉಂಟು ಮಾಡುವ ಸ್ಥಿತಿ ಇದ್ದುದರಿಂದ ಜಯಪ್ರಕಾಶ್ ಅವರ ವಿರುದ್ದ ಮುಂಜಾಗ್ರತಾ ಕ್ರಮವಾಗಿ ಕಲಂ. 107 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಲಾಗಿದೆ.


























