ಉಪ್ಪಿನಂಗಡಿ: ಸ್ನೇಹದ ನಾಟಕವಾಡಿ ಬೈಕ್ ಪಡೆದು ಪರಾರಿಯಾಗಿದ್ದ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಳಿಮುಖ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೈಕ್ ಸಮೇತ ವಶಕ್ಕೆ ಪಡೆಯಲಾಗಿದೆ.
ಉಪ್ಪಿನಂಗಡಿಯ ರಾಜಧಾನಿ ಟವರ್ಸ್‌ನಲ್ಲಿರುವ ಶ್ರೀ ದೇವಿ ಸ್ಟಿಕ್ಕರ್ ಕಟಿಂಗ್ಸ್ ಸೆಂಟರ್ ಮಾಲಕ ಶೀನಪ್ಪ ಮುಗೇರ ಅವರಿಂದ ಬೈಕ್ ಪಡೆದು ಪರಾರಿಯಾಗಿದ್ದ ಶ್ಯಾಮ್ ಜಿ ಕೃಷ್ಣನ್ (31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 16ರಂದು ಆರೋಪಿ “ಒಮ್ಮೆ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ” ಎಂದು ಹೇಳಿ ಬೈಕ್ ಪಡೆದು ಹೊರಟು ನಾಪತ್ತೆಯಾಗಿದ್ದಾನೆ.
ನಂತರ ಶೀನಪ್ಪ ಅವರಿಗೆ ಫೋನ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂಬ ಆರೋಪವೂ ಇದೆ. ಈ ಕುರಿತು ದೂರು ದಾಖಲಾದರೂ ಆರಂಭದಲ್ಲಿ ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.
ಏಳು ದಿನಗಳ ನಂತರ ಆರೋಪಿಯ ಮೊಬೈಲ್ ಟ್ರ್ಯಾಕಿಂಗ್ ಮೂಲಕ ಗಾಳಿಮುಖದಲ್ಲಿ ಅವನ ಇರುವಿಕೆ ಪತ್ತೆಯಾಗಿದ್ದು, ಮಂಗಳವಾರ ನಸುಕಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬೈಕ್ ಅನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.



























