ಪುತ್ತೂರು: ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ನಿರಂತರವಾಗಿ ಅಧಿಕಾರ ನಡೆಸಿದ ಚುನಾಯಿತ ಪ್ರಧಾನಿಯಾಗಿ ಹೊಸ ದಾಖಲೆ ಬರೆದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯ ಶುಭ ಸಂದರ್ಭದಲ್ಲಿ, ಅವರ ಸ್ವಚ್ಛ ಭಾರತ ಅಭಿಯಾನದ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಶೇಷ ಸೇವಾ ಕಾರ್ಯವನ್ನು ಕೈಗೊಂಡಿದೆ.
ಪಾಣಾಜೆ ಗ್ರಾಮದ ತೂಂಬಡ್ಕದ ವೃದ್ಧ ದಂಪತಿಗಳ ಮನೆಯಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದನ್ನು ಗಮನಿಸಿದ ಟ್ರಸ್ಟ್, ಅವರಿಗೆ ನೂತನ ಶೌಚಾಲಯ ನಿರ್ಮಿಸಿ ಕೊಡುವುದರ ಜೊತೆಗೆ ಮನೆಗೆ ಅಗತ್ಯ ನವೀಕರಣ ಕಾರ್ಯಗಳನ್ನೂ ಪೂರ್ಣಗೊಳಿಸಿದೆ.
ಪಾಣಾಜೆ ಗ್ರಾಮದ ಕಾರ್ಯಕರ್ತರೊಬ್ಬರ ಮನೆಯ ಶುಭ ಸಮಾರಂಭಕ್ಕೆ ಆಗಮಿಸಿದ್ದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ಅವರ ಬಳಿ ವೃದ್ಧ ದಂಪತಿಗಳು ತಮ್ಮ ಮನೆಯಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದೆ, ಹುಟ್ಟಿನಿಂದಲೂ ಶೌಚಾಲಯ ಬಳಸಿಲ್ಲ ಎಂಬ ನೋವನ್ನು ಹಂಚಿಕೊಂಡಿದ್ದರು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಅರುಣ್ ಕುಮಾರ್ ಪುತ್ತಿಲ ಅವರು ತಕ್ಷಣವೇ ಗ್ರಾಮ ಸಮಿತಿ ಕಾರ್ಯಕರ್ತರೊಂದಿಗೆ ಚರ್ಚಿಸಿ, ವೃದ್ಧ ದಂಪತಿಗೆ ಶೌಚಾಲಯ ನಿರ್ಮಿಸಿಕೊಡುವಂತೆ ಸೂಚಿಸಿದರು. ಅವರ ಮನೆಯಲ್ಲಿ ಕಿಟಕಿ ಹಾಗೂ ಬಾಗಿಲುಗಳೂ ಇಲ್ಲದಿರುವುದನ್ನು ಗಮನಿಸಿ, ಅವುಗಳನ್ನು ಅಳವಡಿಸುವುದರೊಂದಿಗೆ ಮನೆಗೆ ಅಗತ್ಯ ನವೀಕರಣ ಕಾರ್ಯವನ್ನೂ ಕೈಗೊಳ್ಳಲಾಯಿತು.
ಈ ಸೇವಾ ಕಾರ್ಯಕ್ಕೆ ದಾನಿಗಳು ಹಾಗೂ ಸ್ಥಳೀಯ ಕಾರ್ಯಕರ್ತರು ಕೈಜೋಡಿಸಿದ್ದು, ವೃದ್ಧ ದಂಪತಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಸಮಾಜದ ಅಗತ್ಯವಿರುವ ಕುಟುಂಬಗಳಿಗೆ ನೆರವಾಗುವ ಇಂತಹ ಸೇವಾ ಚಟುವಟಿಕೆಗಳು ಮುಂದೆಯೂ ನಿರಂತರವಾಗಿ ನಡೆಯಲಿವೆ ಎಂದು ಟ್ರಸ್ಟ್ ತಿಳಿಸಿದೆ.
ಈ ಸಂಧರ್ಭದಲ್ಲಿ ಪುತ್ತಿಲಪರಿವಾರ ಸೇವಾ ಟ್ರಸ್ಟ್(ರಿ) ಪುತ್ತೂರಿ ನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ, ಅದ್ಯಕ್ಷರಾದ ಶ್ರೀರಾಮ್ ಭಟ್ ಪಾತಾಳ,ಪ್ರಧಾನ ಕಾರ್ಯದರ್ಶಿ ಪ್ರೇಮ್ ರಾಜ್ ಆರ್ಲಪದವು, ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ,ನಿರ್ದೇಶಕರಾದ ಸುಜಿತ್ ಕಜೆ,ಮನೀಶ್ ಕುಲಾಲ್,ಧೀರನ್, ಪಾಣಾಜೆ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಟ್ರಸ್ಟ್ ನ ಮಾರ್ಗದರ್ಶಕರುಗಳಾದ ರಾಕೇಶ್ ರೈ ಕಡಮಾಜೆ,ಹರಿಪ್ರಸಾದ್ ಕಾಸರಗೋಡು ಹಾಗೂ ಪುತ್ತಿಲಪರಿವಾರ ಸೇವಾ ಟ್ರಸ್ಟ್ ನ ಪಾಣಾಜೆ ಗ್ರಾಮ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ ಕುಲಾಲ್ ಉಡ್ಡಂಗಳ , ಪ್ರಧಾನ ಕಾರ್ಯದರ್ಶಿ ಸುಖಿನ್ ರಾಜ್ ಕೊಂದಲ್ಕಾನ ಪಧಾದಿಕಾರಿಗಳಾದ ಪ್ರದೀಪ್ ಪಾಣಾಜೆ,ವಸಂತ ಕುಮಾರ್ ಭರಣ್ಯ,ಸಂದೀಪ್ ಕೆ ಕಡಮಾಜೆ,ರವಿಚಂದ್ರ ಭರಣ್ಯ, ರವಿಚಂದ್ರ ಕೊಂದಲಡ್ಕ,ಮೋಹನ್ ನಾಯ್ಕ ತೂಂಬಡ್ಕ, ಕೀರ್ತಿರಾಜ್ ಉಡ್ಡಂಗಳ, ಸುರೇಶ್ ತೂಂಬಡ್ಕ,ವಿನು ಭರಣ್ಯ,ಜಯಪ್ರಸಾದ್ ರೈ ಕೋಟೆ,ಮಹೇಶ್ ಭರಣ್ಯ,
ಉಪಸ್ಥಿತರಿದ್ದರು.



























