ಪೈವಳಿಕೆ : ಮಟ್ಟನ್ನೂರು ಪಾಲಿಟೆಕ್ನಿಕ್‌ನಲ್ಲಿ ನಡೆದ ಕೇರಳ ಸರಕಾರಿ ಸರ್ಟಿಫಿಕೇಟ್ ಎಕ್ಸಾಮಿನೇಶನ್ (ಕೆಜಿಸಿಇ)ಗೆ ಮೊಬೈಲ್ ಫೋನ್ ಬಳಸಿಕೊಂಡು ಪರೀಕ್ಷೆಯ ಉತ್ತರ ಬರೆದ ಪ್ರಕರಣಕ್ಕೆ ಸಂಬಂಧಿಸಿ ಪೈವಳಿಕೆ ಕುರುಡಪದವು ಬಳಿಯ ಸಾದಂಗಯ ನಿವಾಸಿ, ಕೆಎಸ್‌ಇಬಿ ವರ್ಕಾಡಿ ಸೆಕ್ಷನ್ ನ ತಾತ್ಕಾಲಿಕ ನೌಕರ ಎಸ್. ಜನಾರ್ದನ ನನ್ನು ಕೂತುಪರಂಬ ಎಸಿಪಿ ಸಿಬಿ ಟೋಂ ನೇತೃತ್ವದಲ್ಲಿ ಬಂಧಿಸಲಾಗಿದೆ.
ಕೆ.ಎಸ್.ಇ.ಬಿ. ವರ್ಕಾಡಿ ಸೆಕ್ಷನ್ ನಲ್ಲಿ ತಾತ್ಕಾಲಿಕ ನೌಕರನಾಗಿರುವ ಜನಾರ್ದನ ಪರೀಕ್ಷೆಯ ಪೂರ್ವಭಾವಿಯಾಗಿ ಕಣ್ಣೂರು ಮೋಡರ್ನ್ ಐಟಿಐಯಲ್ಲಿ ನಡೆದ ತರಗತಿಯಲ್ಲಿ ಪಾಲ್ಗೊಂಡಿದ್ದ.
ಅಧ್ಯಾಪಕ ಒಬ್ಬರು ಮೊಬೈಲ್ ಫೋನ್ ಮೂಲಕ ಉತ್ತರಗಳನ್ನು ಕಳುಹಿಸಿ ಕೊಟ್ಟಿರುವುದಾಗಿ ತಿಳಿದು ಬಂದಿದೆ. ಜನಾರ್ದನ ಬಂಧಿತನಾಗಿರುವುದು ತಿಳಿದು ಅಧ್ಯಾಪಕರು ತಲೆಮರೆಸಿಕೊಂ ಡಿದ್ದಾರೆ ಎನ್ನಲಾಗಿದೆ. ಜನಾರ್ದನ ಅಲ್ಲದೆ ಇತರ 21 ಮಂದಿ ಪರೀಕ್ಷೆ ಬರೆದಿದ್ದಾರೆ. ಅವರಿಗೂ ಉತ್ತರಗಳನ್ನು ಇದೇ ರೀತಿ ನೀಡಿರಬಹುದೆಂದು ಶಂಕಿಸಲಾಗಿದೆ. ಈ ಕುರಿತು ತನಿಖೆ ಆರಂಭಿಸಲಾಗಿದೆ.

























