ಮಂಗಳೂರು: ಸ್ಕೂಟರ್ ನಲ್ಲಿ ಸ್ಟಂಟ್ ಮಾಡುತ್ತಾ ಅಪಾಯಕಾರಿ ಯಾಗಿ ಸವಾರಿ ಮಾಡುತ್ತಿದ್ದ ಯುವಕ ನಿಗೆ ಮಂಗಳೂರು ನಗರ ಸಂಚಾರ ಪೊಲೀಸರು 7,000 ರೂ ದಂಡ ವಿಧಿಸಿದ್ದಾರೆ.ಕೊಣಾಜೆ ಬಳಿ ವಿದ್ಯಾರ್ಥಿ ಯೋರ್ವ ರಸ್ತೆಯಲ್ಲಿ ಸ್ಟಂಟ್ ಮಾಡಿದ್ದ.
ಇದರ ವೀಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಿದ್ದಾರೆ. ಅಲ್ಲದೆ ಚಾಲನ ಪರವಾನಿಗೆ ರದ್ದತಿಗೆ ಸಾರಿಗೆ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ.

























