ಕಾರ್ಕಳ: ಪತಿ, ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಕಾರ್ಕಳಕ್ಕೆ ಬಂದಿದ್ದ ವಿವಾಹಿತೆಯೊಬ್ಬಳ ಪ್ರಕರಣ ಪೊಲೀಸ್ ಠಾಣೆಯಲ್ಲಿ ಕುಟುಂಬದವರ ಸಮ್ಮುಖದಲ್ಲಿ
ಸುಖಾಂತ್ಯ ಕಂಡಿದೆ.
ಮಹಿಳೆ ತನ್ನ ಪ್ರಿಯಕರನೊಂದಿಗೆ ಕಾರ್ಕಳದಲ್ಲಿ ವಾಸವಿದ್ದ ಮಾಹಿತಿ ತಿಳಿದು ಪತಿ, ಕುಟುಂಬಸ್ಥರು ಇಲ್ಲಿನ ಪೊಲೀಸ್ ಠಾಣೆ ಸಂಪರ್ಕಿಸಿದ್ದರು. ಬಳಿಕ ಪೊಲೀಸರು ಇಬ್ಬರನ್ನೂ
ಠಾಣೆಗೆ ಕರೆಸಿ ಸಮಾಲೋಚನೆ ನಡೆಸಿ ಕುಟುಂಬದ ಜವಾಬ್ದಾರಿ ಕುರಿತು ಮಹಿಳೆಗೆ ಬುದ್ಧಿವಾದ ಹೇಳಿದರು.
ಕುಟುಂಬಸ್ಥರ ಮನವಿಯ ಬಳಿಕ ಮಹಿಳೆ ತನ್ನ ತಪ್ಪನ್ನು ಅರಿತು ಪತಿ ಮತ್ತು ಮಕ್ಕಳೊಂದಿಗೆ ಮರಳಿ ಜೀವನನಡೆಸಲು ಒಪ್ಪಿಕೊಂಡಿದ್ದು ಪ್ರಕರಣ ಸುಖಾಂತ್ಯ ಗೊಂಡಿದೆ.
ಘಟನೆ ರಾಜಿಯಲ್ಲಿ ಮುಗಿದ ಯಾವುದೇ ಪ್ರಕರಣ ಕಾರಣ ದಾಖಲಾಗಲಿಲ್ಲ.

























