ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಜು.18ರಂದು ಮಧ್ಯಾಹ್ನ ಯುವಕನೋರ್ವ ತಲವಾರು ಹಿಡಿದುಕೊಂಡು ಮೊಬೈಲ್ ಅಂಗಡಿಗೆ ನುಗ್ಗಿ ಗಲಾಟೆ ನಡೆಸಿದ ಪ್ರಸಂಗ ಕೆಲಸಮಯ ಆತಂಕಕ್ಕೆ ಕಾರಣವಾಯಿತು.
ಬಸ್ಸು ನಿಲ್ದಾಣದಲ್ಲಿರುವ ಮೊಬೈಲ್ ಅಂಗಡಿಯೊಂದಕ್ಕೆ ತಲವಾರು ಹಿಡಿದುಕೊಂಡು ಹೋದ ಯುವಕ ನೇರವಾಗಿ ಮೊಬೈಲ್ ಅಂಗಡಿಯವರಲ್ಲಿ ಗಲಾಟೆಗಿಳಿದಿದ್ದಾನೆ. ಗ್ರಾಹಕರು ಇರುವಾಗಲೇ ತಲವಾರು ಝಳಪಿಸಿದ ಯುವಕನನ್ನು ಅಲ್ಲಿನ ಕೆಲ ಯುವಕರು ಉಪಾಯದಿಂದ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಆತ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದು ಈ ಸಂಬಂಧ ಶಸ್ತ್ರಾಸ್ತ ಕಾಯ್ದೆ ಹಾಗೂ ಅನ್ವಯವಾಗುವ ಇತರೆ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.


























