ಪುತ್ತೂರು:ಬಿಜೆಪಿ ಪುತ್ತೂರು ನಗರ
ವ್ಯಾಪಾರ ಪ್ರಕೋಷ್ಟದ ಸಂಚಾಲಕರಾಗಿ ನೇಮಕಗೊಂಡ ಉದ್ಯಮಿ, ಯು. ಆರ್.ಪ್ರಾಪರ್ಟೀಸ್‌ನ ಮಾಲಕ ಉಜ್ವಲ್ ಪ್ರಭು ಅವರನ್ನು ಸ್ಟೀಲ್ ಫ್ಯಾಬ್ರಿಕೇಷನ್ ಅಸೋಸಿಯೇಷನ್ ಪುತ್ತೂರು ಇದರ ವತಿಯಿಂದ ಆ.1ರಂದು ಅವರ ಕಚೇರಿಯಲ್ಲಿ ಅಭಿನಂದಿಸಲಾಯಿತು.
ಅಸೋಸಿಯೇಷನ್‌ನ ಅಧ್ಯಕ್ಷ ಸುಧೀರ್ ಶೆಟ್ಟಿ, ಕಾರ್ಯದರ್ಶಿ ದಯಾನಂದ ಗೌಡ ಕೆಮ್ಮಾಯಿ, ಉಪಾಧ್ಯಕ್ಷ ಮೋಹನ ಗೌಡ, ದಯಾಕರ ಹೆಗ್ಡೆ ಬೊಳುವಾರು ಅವರು ಉಜ್ವಲ್ ಪ್ರಭು ಅವರನ್ನು ಗೌರವಿಸಿ ಅಭಿನಂದಿಸಿದರು.



























