ಪುತ್ತೂರು: ಪೆರುವಾಯಿ ಗ್ರಾಮದ ಪೆರುವಾಯಿ ಜಂಕ್ಷನ್‌ನಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರ ಅನುದಾನದಿಂದ ನಿರ್ಮಾಣಗೊಂಡ ನೂತನ ರಿಕ್ಷಾ ತಂಗುದಾಣ ಉದ್ಘಾಟನೆಗೊಂಡಿತು.
ಈ ರಿಕ್ಷಾ ತಂಗುದಾಣವು ಈ ಭಾಗದ ರಿಕ್ಷಾ ಚಾಲಕರ ಬಹುಕಾಲದ ಬೇಡಿಕೆಯಾಗಿದ್ದು, ಇದೀಗ ಸಾಕಾರಗೊಂಡಿರುವುದಕ್ಕೆ ಚಾಲಕರು ಸಂತಸ ವ್ಯಕ್ತಪಡಿಸಿದರು.
ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸಾರ್ವಜನಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ನ್ಯಾಯವಾದಿ ಭಾಸ್ಕರ ಪೆರುವಾಯಿ, ರಾಮಣ್ಣ ಪಿಲಿಂಜ, ಅಬ್ದುಲ್ ಕರೀಂ ಕುದ್ದುಪದವು, ರಾಜೇಂದ್ರನಾಥ್ ರೈ, ನಫೀಸಾ ಪೆರುವಾಯಿ, ಶ್ರೀಧರ ಬಾಳೆಕಲ್ಲು, ರಶ್ಮಿ ಎಂ., ಸಮೀರ್ ಬದಿಯಾರು ಸೇರಿದಂತೆ ಬೂತ್ ಅಧ್ಯಕ್ಷರಾದ ಕೆ. ಮಹಮ್ಮದ್, ವಿನ್ಸೆಂಟ್ ಡಿಸೋಜ, ಗೋಪಾಲಕೃಷ್ಣ ನಾಯ್ಕ್, ರಂಜಿತ್ ಮಾರ್ಲ, ಸತೀಶ ಮಣಿಯಾಣಿ, ಶಾಫಿ ಸೇನೆರಪಾಲು, ಜಯರಾಮ ಶೆಟ್ಟಿ ಬದಿಯಾರು, ಅಬ್ದುಲ್ಲ ಕಾನ, ಲಿಯೋ ಡಿಸೋಜ, ಜಿ.ಎಸ್. ಕುಮಾರ್ ಹಾಗೂ ಅಶೋಕ್ ಡಿಸೋಜ ಮುಳ್ಳಚ್ಚಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.




























