ಪುತ್ತೂರು: ಮಿನಿ ಟೆಂಪೋ ಟ್ರಾವೆಲ್ಲರ್ ಮತ್ತು ಇನ್ನೋವಾ ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮುಖ್ಯರಸ್ತೆಯ ಧರ್ಮಸ್ಥಳ ಕಟ್ಟಡದ ಬಳಿ ನಡೆದಿದೆ.
ಘಟನೆ ಪರಿಣಾಮ ವಾಹನಗಳಿಗೆ ಹಾನಿಯಾಗಿದ್ದು ತುಸು ಕಾಲ ವಾಹನ ಸಂಚಾರಕ್ಕೆ ಅಡೆಚಣೆ ಉಂಟಾಗಿದ್ದು ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು ಎಂದು ತಿಳಿದು ಬಂದಿದೆ.




























