ಪುತ್ತೂರು : ಹಲ್ಲೆ ಹಾಗೂ ಜಾತಿ ನಿಂದನೆ ಪ್ರಕರಣದ ಆರೋಪಿಗಳನ್ನೆಲಾಗಿದ್ದ ಕಡಬ ತಾಲೂಕಿನ ಮರ್ದಾಲ ಗ್ರಾಮದ ರಮೇಶ್, ಉಮೇಶ್, ಚಂದನ್, ರೋಹಿತ್ ಹಾಗೂ ದೇವಿಪ್ರಸಾದ್ ಎಂಬುವವರಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಸದಾನಂದ ನಾಗಪ್ಪ ನಾಯಕರವರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.
ದಿನಾಂಕ 03/08/2026 ರಂದು ಮಳೆಯ ಸಲುವಾಗಿ ಶಾಲೆಗೆ ಶಾಲೆಗಳಿಗೆ ರಜೆ ಇದ್ದದ್ದರಿಂದ, ಈ ಪ್ರಕರಣದ ಫಿರ್ಯಾದಿ (ಮಂಜುನಾಥ್ ) ತನ್ನ ತರಗತಿಯ ಸ್ನೇಹಿತರೊಂದಿಗೆ ಬಂಟ್ರ ಗ್ರಾಮದ ಕುಂಡಡ್ಕ ಫಾಲ್ಸ್ ಗೆ ಹೋಗುವುದಾಗಿ ನಿರ್ಧರಿಸಿ ಮಧ್ಯಾಹ್ನ ಸುಮಾರು 12.00 ಗಂಟೆಗೆ ಫಾಲ್ಸ್ ಗೆ ಬಂದಿರುತ್ತಾರೆ. ಅದೇ ಸಮಯದಲ್ಲಿ ರೋಹಿತ್ ಎಂಬುವರು ಅವರ ಸ್ನೇಹಿತರಾದ ದೇವಿ ಪ್ರಸಾದ್ ಹಾಗೂ ಚಂದನ್ ಎಂಬುವರೊಂದಿಗೆ ಕುಂಡಡ್ಕ ಫಾಲ್ಸ್ ಗೆ ಬಂದಿದ್ದು, ಪಿರ್ಯಾದಿ ಹಾಗೂ ಅವನ ಸ್ನೇಹಿತರು ರೋಹಿತ್ ಹಾಗೂ ಅವರ ಸ್ನೇಹಿತರನ್ನು ಹಿಂಬಾಲಿಸುತ್ತಿದ್ದು. ಸ್ವಲ್ಪ ಸಮಯದ ನಂತರ ರಮೇಶ್ ಹಾಗೂ ಉಮೇಶ್ ಎಂದು ಅವರು ಕೂಡ ಕುಂಡಡ್ಕ ಫಾಲ್ಸ್ ಗೆ ಬಂದಿದ್ದು, ಅಲ್ಲಿ ಪಿರ್ಯಾದಿ ಅವನ ಸ್ನೇಹಿತರು ಹಾಗೂ ಆರೋಪಿಗಳ ನಡುವೆ ಮಾತಿನ ಚಕಮಕಿ ಆಗಿ ಆರೋಪಿಗಳು ಪಿರ್ಯಾದಿ ಹಾಗೂ ಅವನ ಸ್ನೇಹಿತರಿಗೆ ಹಲ್ಲೆ ಮಾಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿಗೆ ಜಾತಿನಿಂದನೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ. ಈ ಕುರಿತು ರಮೇಶ್, ಉಮೇಶ್, ದೇವಿ ಪ್ರಸಾದ್, ರೋಹಿತ್ ಹಾಗೂ ಚಂದನ್ ರವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ SC/ST ಕಾಯ್ದೆಯ ರನ್ವಯ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಿದರು.
ಹೀಗಿರುವಾಗ ರಮೇಶ್, ಉಮೇಶ್, ದೇವಿ ಪ್ರಸಾದ್, ರೋಹಿತ್ ಹಾಗೂ ಚಂದನ್ ರವರು ತಮ್ಮ ಪರ ವಕೀಲರಾದ ಕಜೆ ಲಾ ಚೆoಬರ್ಸ್ ನ ಶ್ರೀ ಮಹೇಶ್ ಕಜೆ ಅವರ ಮುಖಾಂತರ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದರು. ಸರ್ಕಾರಿ ಅಭಿಯೋಜಕರು ಜಾಮೀನು ಅರ್ಜಿಗೆ ಆಕ್ಷೇಪವನ್ನು ಸಲ್ಲಿಸಿದರು. ವಾದ ವಿವಾದಗಳನ್ನು ಆಲಿಸಿದ ಪುತ್ತೂರಿನ ಮಾನ್ಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ದಿನಾಂಕ 02/09/2026 ರಂದು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುತ್ತಾರೆ.




























