ಪುತ್ತೂರು: ಕಳೆದ ಹಲವಾರು ವರ್ಷಗಳಿಂದ ಪುತ್ತೂರು ಸಹಿತ ಕರಾವಳಿ ಹಾಗೂ ರಾಜ್ಯಾದ್ಯಂತ ತಮ್ಮ ಶುಚಿ-ರುಚಿಯಾದ ಮಸಾಲೆಗಳ ಮೂಲಕ ಚಿರಪರಿಚಿತರಾಗಿರುವ ‘ಎಸ್.ಜಿ ಪ್ಯೂರ್’ ಸಂಸ್ಥೆ ಇದೀಗ ಮತ್ತೊಂದು ಕೊಡುಗೆ ನೀಡಲು ಸಿದ್ಧವಾಗಿದೆ.
‘ಎಸ್.ಜಿ ಪ್ಯೂರ್’ ಸಂಸ್ಥೆ ವತಿಯಿಂದ ‘ಎಸ್.ಜಿ ಪ್ಯೂರ್’ ಸೂಪರ್ ಮಾರ್ಕೆಟ್ ಸೆ.13ರಂದು ಪುತ್ತೂರು ಬೈಪಾಸ್ ರಸ್ತೆಯ ಪ್ರಾರ್ಥನಾ ಗಾರ್ಡನ್ ಹೋಟೆಲ್ ಬಳಿ ಶುಭಾರಂಭಗೊಳ್ಳಲಿದೆ.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿಗಳಾದ ಕುಂಟಾರು ರವೀಶ ತಂತ್ರಿ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಹಿರಿಯ ವಕೀಲ ಮಹೇಶ್ ಕಜೆ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು, ಉದ್ಯಮಿಗಳಾದ ಸಹಜ್ ರೈ ಬಳಜ್ಜ, ಉಜ್ವಲ್ ಪ್ರಭು ಯುಆರ್ ಪ್ರಾಪರ್ಟಿಸ್, ಸಿಜ್ಲರ್ ಮಾಲಕರಾದ ಪ್ರಸನ್ನ ಕುಮಾರ್ ಶೆಟ್ಟಿ, ದರ್ಬೆ ಏಷ್ಯನ್ ವುಡ್ ನ ಕೆಎಂ ಇಸ್ಮಾಯಿಲ್, ತುಳಸಿ ಕ್ಯಾಟರರ್ಸ್ ನ ಹರೀಶ್ ಭಟ್, ಎಸ್.ಕೆ.ಪಿ.ಎ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ, ಗಾನಸರಸ್ವತಿ ಸಂಗೀತ ಕಲಾ ಶಾಲೆಯ ವಿದುಷಿ ವೀಣಾ ರಾಘವೇಂದ್ರ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಆಡಳಿತ ಪಾಲುದಾರರಾದ ಶ್ರವಣ್ ಕುಮಾರ್, ಗಿರಿಧರ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





























