ಪುತ್ತೂರು: ಪುತ್ತೂರಿನಲ್ಲಿ ಕಳೆದ 8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರಜ್ವಲ್
ಎಂ.ಎಸ್. ರವರ ಮಾಲಕತ್ವದ ಪಿಕ್ಸೆಲ್ ಕ್ರಿಯೇಟಿವ್ಸ್ ಸಂಸ್ಥೆಯ ನೂತನ ಕಚೇರಿಯ ಶುಭಾರಂಭವು ಆ. 28 ರಂದು ಜರಗಲಿದೆ.
ನೆಹರುನಗರ ಕಲ್ಲೇಗ ದೈವಸ್ಥಾನದ ಬಳಿಯ ಅಶ್ವಿನ್ ಕಾಂಪ್ಲೆಕ್ಸ್‌ನಲ್ಲಿ ಸಂಸ್ಥೆಯ ನೂತನ ಕಚೇರಿ ಶುಭಾರಂಭಗೊಳ್ಳಲಿದೆ. ಎಲ್ ಇಡಿ ವಿಡಿಯೋ ವಾಲ್, ಟಿವಿ, ಪ್ರೊಜೆಕ್ಟರ್, ವಿಡಿಯೋಗ್ರಾಫಿ, ಮಾಧ್ಯಮ ನೇರಪ್ರಸಾರಕ್ಕೆ ಸಂಬಂಧಿಸಿದ ತಾಂತ್ರಿಕ ವ್ಯವಸ್ಥೆ ಹಾಗೂ ಲೈವ್ ವಿಡಿಯೋ ಮಿಕ್ಸಿಂಗ್ ನಲ್ಲಿ ಗುಣಮಟ್ಟದ ಸೇವೆ ನೀಡುತ್ತಾ ಬಂದಿರುವ ಸಂಸ್ಥೆಯು ಹತ್ತೂರಿನಲ್ಲಿ ಪ್ರಸಿದ್ದಿ ಪಡೆದಿದೆ.





























