ಪುತ್ತೂರು: ಪ್ರತಿಷ್ಠಿತ ಸಂಸ್ಥೆ ಯು ಆರ್ ಪ್ರಾಪರ್ಟೀಸ್ ಗೆ ನಟಿ ರಾಧಿಕಾ ಕುಮಾರಸ್ವಾಮಿ ಭೇಟಿ ನೀಡಿದರು.
ಅ.09 ರಂದು ಭೇಟಿ ನೀಡಿದ ಅವರು ಸಂಸ್ಥೆಯ ಕೆಲಸ ಕಾರ್ಯಗಳ ಬಗ್ಗೆ, ಮುಂಬರುವ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಮಾಲಕರಾದ ಉಜ್ವಲ್ ಪ್ರಭು ದಂಪತಿ ಹೂ ಗುಚ್ಛ ನೀಡಿ ಅವರನ್ನು ಸ್ವಾಗತಿಸಿದರು.
ಬಳಿಕ ಯು ಆರ್ ಪ್ರಾಪರ್ಟೀಸ್ ನ ಅತೀ ದೊಡ್ಡ ಬಡಾವಣೆ ಬೆದ್ರಾಳ ದ ಶ್ರೀಮಾ ಥೀಮ್ ಪಾರ್ಕ್ ಗೆ ಭೇಟಿ ನೀಡಿ ಅಲ್ಲಿನ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಯು ಆರ್ ಪ್ರಾಪರ್ಟೀಸ್ ನ ಸಿಬ್ಬಂದಿಗಳು ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.




























