ಪುತ್ತೂರು : ಕೊರೊನಾ ಪ್ರಯುಕ್ತ ಎಲ್ಲೆಡೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು.. ಲಾಕ್ ಡೌನ್ ಕಾರಣಕ್ಕೆ ದೇವಳಗಳೆಲ್ಲವನ್ನೂ ಮುಚ್ಚಲಾಗಿತ್ತು.ಇದೀಗ ಮತ್ತೆ ದೇವಸ್ಥಾನಗಳ ಪೂಜೆ ಆರಂಭವಾಗಿದೆ.
ಇಲ್ಲಿಯವರೆಗೆ ಪುತ್ತೂರಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಲಕ್ಷ್ಮಿ ದೇವಿ ಬೆಟ್ಟದಲ್ಲಿ ಪೂಜಾ ಕಾರ್ಯಗಳು, ಸೇವೆಗಳು ಅಲಭ್ಯವಾಗಿತ್ತು. ಇದೀಗ ಜೂ.5 ರಿಂದ ಲಕ್ಷ್ಮಿ ದೇವಿ ಬೆಟ್ಟ ತೆರೆದುಕೊಳ್ಳಲಿದ್ದು ದೇವರ ದರ್ಶನ ಹಾಗೂ ಆರತಿ ಪಡೆಯಲು ಅವಕಾಶವಿದೆ ಎಂದು ವ್ಯವಸ್ಥಾಪನಾ ಸಮಿತಿಯವರು ತಿಳಿಸಿದ್ದಾರೆ.